News Karnataka Kannada
Thursday, May 02 2024
ಮಂಡ್ಯ

ಲಲಿತ ಕಲೆಗಳು ಬದುಕಿನ ಧರ್ಮವಾಗಲಿ:ಡಾ.ಪ್ರದೀಪಕುಮಾರ ಹೆಬ್ರಿ

Hebri
Photo Credit :

ಮಂಡ್ಯ: ಲಲಿತಕಲೆಗಳು ಕೇವಲ ವಿದ್ಯೆಯಲ್ಲ, ಶಿಕ್ಷಣವಲ್ಲ, ಅದೊಂದು ಪ್ರಜ್ಞೆ, ಸಂಸ್ಕಾರ. ಇಂತಹ ಲಲಿತಕಲೆಗಳು ಬದುಕಿನ ಧರ್ಮವಾಗಬೇಕು ಎಂದು ಹಿರಿಯ ಸಾಹಿತಿ ಡಾ. ಪ್ರದೀಪಕುಮಾರ ಹೆಬ್ರಿ ತಿಳಿಸಿದರು.

ಅವರು ಚಿದಂಬರ ನಟೇಶ ನಾಟ್ಯ ಶಾಲೆ ಟ್ರಸ್ಟ್ ವತಿಯಿಂದ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಚಿದಂಬರ ನೃತ್ಯೋತ್ಸವ ಅಂಗವಾಗಿ ನಡೆದ ಶಾಸ್ತ್ರೀಯ ಭರತನಾಟ್ಯ ಮತ್ತು ಹಿರಿಯ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಲಲಿತಕಲೆ ಅಳವಡಿಸಿಕೊಂಡರೆ ಏನಾದರೂ ಮಾಡಲು ಸಾಧ್ಯ. ಎಷ್ಟೋ ಮಂದಿಗೆ ಲಲಿತಕಲೆ ಪ್ರೊಫೆ?ನ್, ಪೊಸೆಷನ್, ಪ್ರೊಟೆಕ್ಷನ್ ಆಗಿದೆ. ಲಲಿತಕಲೆಗಳು ಬದುಕಿನ ಧರ್ಮವಾದಾಗ ನಾವು ಜೀವನದಲ್ಲಿ ನಿಖರತೆಯನ್ನು ಕಾಣಲು ಸಾಧ್ಯ. ನಮ್ಮಲ್ಲಿ ಅಡಗಿರುವ ರಕ್ಕಸ ಯಾರೆಂದರೆ ಹೊರಗಿನಿಂದ ಬಂದವನಲ್ಲ. ಜಡತ್ವ ಎಂಬುದು ನಮ್ಮೊಳಗಿರುವ ರಕ್ಕಸನಾಗಿದ್ದು, ಅದನ್ನು ನೀಗಿಸಿಕೊಂಡರೆ ಮಾತ್ರ ಕ್ರಿಯಾಶೀಲವಾಗಲು ಸಾಧ್ಯ ಎಂದರು.

ಇಲ್ಲಿನ ಗುರುದೇವ ಅಕಾಡೆಮಿಯ ಚೇತನ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ಬೆಳೆದ ಎಷ್ಟೋ ಪ್ರತಿಭೆಗಳು ನಾಡಿನಾದ್ಯಂತ ನೃತ್ಯಕಲೆಯನ್ನು ಪೋಷಿಸುತ್ತಾ ಅದರ ಸೌರಭವನ್ನು ವಿಸ್ತರಿಸುತ್ತಾ ಬೆಳೆದು ಒಂದು ಹೊಸ ಪರಂಪರೆಗೆ ಆಯಾಮ ತಂದು ಕೊಟ್ಟಿದೆ. ಬದುಕನ್ನು ತಿದ್ದಿಕೊಳ್ಳಲು ಸಾಧ್ಯವಾಗುವುದು ಇಂತಹ ಹಳೆಯ ಕಲಾ ಪರಂಪರೆಯನ್ನು ಮನೆಮನೆಗೆ, ಮನಮನಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು. ಇಂತಹ ನೃತ್ಯ, ಸಂಗೀತ, ಕಲೆಗಳು ಏಕೆ ಎಂದರೆ ಅವು ನಮ್ಮನ್ನು ಮಾನವತ್ವದಿಂದ ದೇವತ್ವದ ಕಡೆಗೆ ಕೊಂಡೊಯ್ಯುತ್ತದೆ. ನಮ್ಮ ಬದುಕಿಗೆ ಅಂಟಿಕೊಂಡಿರುವ ವಿಷಾದ ಭಾವವನ್ನು ಸಪ್ತಸ್ವರಗಳ ಮೂಲಕ ನೀಗಿಸುತ್ತದೆ. ಸಂಗೀತ ಲಲಿತ ಕಲೆಗಳು ಮನದೊಳಗಿನ ಭಾವನೆಯನ್ನು ಭಾಷೆಯ ರೂಪದಲ್ಲಿ ಈ ಸಮಾಜಕ್ಕೆ ವಿನಿಮಯ ಮಾಡುತ್ತವೆ ಎಂದರು.

ಸಮಾರಂಭ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ್ ಮಾತನಾಡಿ ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ ಎನ್ನುವ ಮಾತಿದೆ. ಆದರೆ ಇಲ್ಲಿ ನೋಡಿದಾಗ ಕಲೆ ಎಲ್ಲರನ್ನೂ ಅಪ್ಪಿಕೊಂಡಿದೆ ಎನಿಸುತ್ತಿದೆ ಎಂದರು. ಪ್ರಾಚೀನ ಕಾಲದಲ್ಲಿ ಒಂದು ವರ್ಗಕ್ಕೆ ಸೀಮಿತವಾಗಿದ್ದ ಕಲೆಯನ್ನು ಇಂದು ಎಲ್ಲ ವರ್ಗಗಳ ಜನ ಕಲಿತು ಈ ಕಲೆ ಉಳಿಸಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಅತ್ಯಂತ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ನಡೆಸಿರುವುದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಸುನೀತಾರವರು 15 ವರ್ಷಗಳಿಂದ ನಾಟ್ಯ ಶಾಲೆಯನ್ನು ನಡೆಸಿಕೊಂಡು ಅನೇಕ ಶಿ?ರನ್ನು ಬೆಳೆಸುತ್ತಾ ಬಂದಿರುವುದು ಉತ್ತಮವಾಗಿದೆ. ಇದು ನಿರಂತರವಾಗಿ ನಡೆದುಕೊಂಡು ಹೋಗಲಿ ಎಂದು ಶುಭ ಹಾರೈಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು