News Karnataka Kannada
Saturday, April 27 2024
ಮಂಡ್ಯ

ನಾಲೆಯಲ್ಲಿ ಈಜಲು ಹೋಗಿ ಮೂವರು ಸಾವು

Suicide Jump River
Photo Credit :

ಮಂಡ್ಯ: ನಾಲೆಯಲ್ಲಿ ಈಜಲು ಹೋಗಿ ಮೂವರು ಯುವಕರು ಜಲಸಮಾಧಿಯಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ನಡೆದಿದೆ.

ಮಂಡ್ಯದ ಶ್ರೀ ಚಂದಗೋಳಮ್ಮನವರ ಕ್ಷೇತ್ರಕ್ಕೆ ಪರುವಿಗೆ ಬಂದಿದ್ದ 8 ಯುವಕರ ಪೈಕಿ ಮೂವರು ಯುವಕರು ನಾಲೆಗೆ ಈಜಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.‌‌  ಮೈಸೂರಿನ ಕುಂಬಾರಕೊಪ್ಪಲಿನ ಸಿದ್ಧರಾಜು ಅವರ ಪುತ್ರ ಮಂಜು(20), ಆಟೋ ಚಾಲಕ ಮೊಗರಹಳ್ಳಿ ಮಂಟಿಯ ನಿವಾಸಿ ರವಿ(27) ಮತ್ತು ಲೋಕನಾಯಕ ನಗರದ ರವಿ(22) ನಾಟನಹಳ್ಳಿ ಸಮೀಪದ ಮಂದಗೆರೆ ಎಡದಂಡೆ ನಾಲೆಯ ನೀರಿನಲ್ಲಿ ಮುಳುಗಿದ ದುರ್ದೈವಿಗಳು.

ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಠಾಣಾಧಿಕಾರಿ ಶಿವಣ್ಣ ಅವರ ನೇತೃತ್ವದಲ್ಲಿ ಸತತವಾದ ಕಾರ್ಯಾಚರಣೆ ನಡೆಸಿದರೂ ಕತ್ತಲಾದ ಹಿನ್ನೆಲೆಯಲ್ಲಿ ಮೃತ ಯುವಕರ ದೇಹಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು