ಮೈಸೂರು: ಹುಣಸೂರು ಪಟ್ಟಣ ತಹಸೀಲ್ದಾರ್ ಕಚೇರಿ ಬಳಿ ಇರುವ ಸೇತುವೆಯಿಂದ ಲಕ್ಷ್ಮಣತೀರ್ಥ ನದಿಗೆ ವ್ಯಕ್ತಿ ಹಾರಿದ ಘಟನೆ ನಡೆದಿದೆ.
ಹುಣಸೂರು ತಾಲೂಕು ಎಮ್ಮೆಕೊಪ್ಪಲು ಗ್ರಾಮದ ಪುರುಷೋತ್ತಮ್ (45) ನದಿಗೆ ಹಾರಿದ ವ್ಯಕ್ತಿ.ನತನ್ನ ಅಣ್ಣ ರವಿಗೆ ಫೋನ್ ಮಾಡಿ ನಾನು ನದಿಗೆ ಹಾರುತ್ತಿದ್ದೇನೆ ಮಕ್ಕಳನ್ನ ನೋಡಿಕೋ ಎಂದು ಹೇಳಿ ಹಾರಿರುವುದಾಗಿ ತಿಳಿದುಬಂದಿದೆ.
ಸ್ಥಳದಲ್ಲಿ ಪುರುಷೋತ್ತಮ್ ರವರ ಬೈಕ್, ಮೊಬೈಲ್ ಹಾಗೂ ಚಪ್ಪಲಿಗಳು ದೊರೆತಿದೆ.ಅಗ್ನಿಶಾಮಕ ಸಿಬ್ಬಂದಿಗಳು ನದಿಯಲ್ಲಿ ಪುರುಷೋತ್ತಮ್ ಗಾಗಿ ಶೋಧನೆ ಮಾಡುತ್ತಿದ್ದಾರೆ. ಹುಣಸೂರು ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

