ನಂಜನಗೂಡು: ಬೈಕ್ ಒಂದಕ್ಕೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ನಂಜನಗೂಡು -ಹುಲ್ಲಹಳ್ಳಿ ರಸ್ತೆಯ ಕೊಂಗಳ್ಳಿ ಗೇಟ್ ಬಳಿ ನಡೆದಿದೆ.
ಹುಲ್ಲಹಳ್ಳಿ ನಿವಾಸಿ ಹಾಲಿನ ಬಸವಣ್ಣ ಮೃತ ದುರ್ದೈವಿ. ಮೃತ ಬಸವಣ್ಣ ಮತ್ತು ಹುಲ್ಲಹಳ್ಳಿಯ ಪರ್ವೀಜ್ ಇಬ್ಬರು ತಮ್ಮ ಮೋಟಾರ್ ಬೈಕ್ ನಲ್ಲಿ ನಂಜನಗೂಡು ಕಡೆಯಿಂದ ಹುಲ್ಲಹಳ್ಳಿಗೆ ಹೋಗುತ್ತಿದ್ದರು ಎನ್ನಲಾಗಿದೆ.
ಇದೇ ಸಂದರ್ಭ ಹುಲ್ಲಹಳ್ಳಿಯಿಂದ ನಂಜನಗೂಡು ಕಡೆ ಹೋಗುತ್ತಿದ್ದ ಗೂಡ್ಸ್ ಆಟೋ ಚಾಲಕನ ಅಜಾಗರುಕತೆ ಮತ್ತು ಅತಿ ವೇಗದಿಂದ ಬಂದು ಮೋಟಾರ್ ಬೈಕ್ ಗೆ ಡಿಕ್ಕಿ ಹೊಡಿದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಬೈಕ್ ಗೆ ಡಿಕ್ಕಿ ಹೊಡೆದ ಆಟೋ ಪಲ್ಟಿ ಹೊಡಿದಿದೆ. ದಿಕ್ಕಿಯ ರಬಸಕ್ಕೆ ಬೈಕ್ ನಲ್ಲಿದ್ದ ಬಸವಣ್ಣ ಸ್ಥಳದಲ್ಲೇ ಮೃತ ಪಟ್ಟರೆ ಮತೊಬ್ಬ ಪರ್ವೀಜ್ ಎಂಬಾತ ಗಂಭೀರ ಗಾಯಗೊಂಡಿದ್ದಾನೆ.
ಅಲ್ಲದೆ ಆಟೋ ದಲ್ಲಿದ್ದ ಇಬ್ಬರು ವ್ಯಕ್ತಿಗಳಿಗೂ ಸಹ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನು ನಂಜನಗೂಡು ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ದಾಖಲು ಮಾಡಲಾಯಿತು. ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಕೃಷ್ಣಕಾಂತ ಕೋಳಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು, ಮೃತ ವ್ಯಕ್ತಿಯ ಶವವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

