ಮೈಸೂರು : ರೈಲು ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅಶೋಕಪುರಂ ರೈಲ್ವೆ ವರ್ಕ್ ಶಾಪ್ ನಿಂದ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದ ಇಂಜಿನ್‌ಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾರೆ.

47 ವರ್ಷದ ವ್ಯಕ್ತಿ ಶಿವಣ್ಣ ನಾಯಕ್ ಮೃತ ದುರ್ದೈವಿ. ಕೂಲಿ ಕೆಲಸಕ್ಕೆ  ವ್ಯಕ್ತಿ ಮೈಸೂರಿಗೆ ಆಗಮಿಸಿದ್ದರು. ಚಾಮರಾಜನಗರ ಹೆಗ್ಗೋಟಾರ ಗ್ರಾಮದ ವ್ಯಕ್ತಿ ಶಿವಣ್ಣ ನಾಯಕ್ ಸಂಜೆ ಸುಮಾರು 5:15 ರ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಮೈಸೂರಿನ ರೈಲ್ವೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಬ್ ಇನ್ಸ್ಪೆಕ್ಟರ್ ಬಿಪಿ ರಮೇಶ್ ಎಸ್ ರಕ್ಷಣಾದಳದ ಹೆಡ್ ಕಾನ್ಸ್ಟೇಬಲ್ ಆರ್ ಜಗನ್ನಾಥ್ ಭೇಟಿ ನೀಡಿದ್ದಾರೆ. ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.