ನಂಜನಗೂಡು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕವಲಂದೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂಜನಗೂಡು ತಾಲ್ಲೂಕಿನ ವೀರೇಗೌಡನಹುಂಡಿ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿರುವ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ನೇತೃತ್ವದಲ್ಲಿ ದಾಳಿ ನಡೆಸಿ, ಅಕ್ರಮ ಮದ್ಯೆ ಮತ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗ್ರಾಮದ ಮನು (28) ಎಂಬುವವರು ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಹೈವರ್ಡ್ಸ್ 90 ಎಂಎಲ್ ನ 13 ಟೆಟ್ರಾ ಪ್ಯಾಕೆಟ್ ಗಳು, ಓಲ್ಡ್ ಟವರ್ನ್ 180 ಎಂಎಲ್ ನ 4 ಟೆಟ್ರಾ ಪ್ಯಾಕೆಟ್ ಗಳು, ಬ್ಯಾಗ್ ಪೈಪರ್ 90 ಎಂಎಲ್ ನ 9 ಟೆಟ್ರಾ ಪ್ಯಾಕೆಟ್ ಗಳು, ವರ್ಜಿನಲ್ ಚಾಯ್ಸ್ 90 ಎಂಎಲ್ ನ 40 ಟೆಟ್ರಾ ಪ್ಯಾಕೆಟ್ ಗಳು,
ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ 650 ಎಂಎಲ್ ನ 3 ಬಾಟಲ್ ಸೇರಿ ಒಟ್ಟು ಸುಮಾರು 4,135 ರೂಪಾಯಿ ಬೆಳೆ ಬಾಳುವ ಮದ್ಯವನ್ನು ಶೇಖರಣೆ ಮಾಡಿಕೊಂಡು, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು ಕಂಡುಬಂದಿದ್ದು, ಮಾಲುಗಳ ಸಮೇತ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು, ಎಎಸ್ಐ ಬಸವರಾಜು, ಸಿಬ್ಬಂದಿಗಳಾದ ಎಸ್.ಬಿ ರಮೇಶ್ ಪಿಸಿ, ನಾಗೇಂದ್ರ, ರಾಜಶೇಖರ್, ಚೆಲುವರಾಜು ಹಾಜರಿದ್ದರು.

