News Karnataka Kannada
Friday, May 03 2024
ಮಡಿಕೇರಿ

ಕಾಮಗಾರಿ ಅಚ್ಚರಿ: ದುರಸ್ತಿ ನಡೆದು ಒಂದೂವರೆ ತಿಂಗಳೊಳಗೆ ರಸ್ತೆ ಅಡಿ ಭಾಗದಿಂದ ಬೆಳೆದ ಹುಲ್ಲು

Work surprise: Within a month and a half after the road repair, grass has grown from the foot of the road
Photo Credit :

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ಚುನಾವಣೆಗೆ ಮೊದಲು ಹಲವು ರಸ್ತೆಗಳನ್ನು ಡಾಮರೀಕರಣ ಮಾಡಲಾಗಿದೆ. ಇದರಲ್ಲಿ ಭಾಗಶಃ ಕಳಪೆ ಕಾಮಗಾರಿಯಾಗಿದೆ. ಇದಕ್ಕೆ ಸಾಕ್ಷಿ ಎಂಬುವಂತೆ ಗೌಡಳ್ಳಿ ಗ್ರಾಮದ ಪುಲಗಿರಿ ದೇವಸ್ಥಾನದ ರಸ್ತೆ 2.50 ಲಕ್ಷ ರಸ್ತೆ ಸಂಪೂರ್ಣವಾಗಿ ಹುಲ್ಲಿನಿಂದ ಕೂಡಿದ್ದು ಡಾಮರೀಕರಣಗೊಂಡ ರಸ್ತೆ ಅಡಿಭಾಗದಿಂದ ಹುಲ್ಲು ಬೆಳೆಯುತ್ತಿದೆ.

ಡಾಂಬರು ಕಾಮಗಾರಿ ಕಿತ್ತು ಹೋಗಿದೆ. ಇಂಜಿನಿಯರ್ ಮತ್ತು ಗುತ್ತಿಗೆದಾರರು ದುಷ್ಟ ಕೂಟ ಮಾಡಿಕೊಂಡು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಅದೇರೀತಿ ಹೆಗಳ ಗ್ರಾಮದಲ್ಲಿ ಸ್ಮಶಾನ ಕೆ ಹೋಗುವ ದಾರಿಯಲ್ಲಿ 2.50 ಲಕ್ಷ ವೆಚ್ಚದಲ್ಲಿ ಡಾಂಬರು ಕಾಮಗಾರಿ ನಡೆದಿದೆ. ಈ ರಸ್ತೆ ಮಾಡಿ ಒಂದು ತಿಂಗಳಿನಲ್ಲೇ ಈ ರಸ್ತೆ ಗುಂಡಿ ಬಿದ್ದು ಅಲ್ಲಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿರುತ್ತದೆ. ಬಸವನಕೊಪ್ಪ ಗ್ರಾಮದ ಗದ್ದೆಗೆ ಹೋಗುವ ರಸ್ತೆಯು 2.50 ಲಕ್ಷದಲ್ಲಿ ಡಾಮರೀಕರಣ ಆಗಿದ್ದು, ಈ ಜಾಗದಲ್ಲಿ ಕೂಡ ರಸ್ತೆ ಅಡಿಭಾಗದಿಂದ ಹುಲ್ಲು ಬೆಳೆದಿದೆ. ಹಾಗಾಗಿ ಈ ಯಾವುದೇ ರಸ್ತೆಗಳಿಗೆ ಹಣ ಬಿಡುಗಡೆ ಮಾಡದೆ ಈಗ ಮಾಡಿರುವ ಡಾಮರಿಕರಣ ಸಂಪೂರ್ಣ ತೆಗೆದು ಉತ್ತಮವಾಗಿ ಮರು ಡಾಮರೀಕರಣ ಮಾಡಿಕೊಡಬೇಕು. ಈ ಎಲ್ಲಾ ರಸ್ತೆ ಕಳಪಕಾಮಗಾರಿ ಮಾಡಿದಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಅಲ್ಲದೆ ಡಾಂಬರು ಕಾಮಗಾರಿ ವಿಚಾರಣೆ ನಡೆಸದೇ ಬಿಲ್‌ ಮಾಡಲು ಸೂಚಿಸಿದ ಅಧಿಕಾರಿಗಳನ್ನು ಅಮಾನತುಪಡಿಸಿ ಅವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಮಾಡಲಾಗಿದೆ. ಅಲ್ಲದೆ ಮಾಹಿತಿ ಹಕ್ಕು ಅರ್ಜಿ ಹಾಕಲಾಗಿದೆ. ಅಲ್ಲದೆ ಲೋಕಾಯುಕ್ತರಿಗೆ ಈ ರಸ್ತೆಗಳ ಬಗ್ಗೆ ದೂರು ನೀಡಲಾಗುವುದು ಎಂದು ಕರವೇ ಹೇಳಿದೆ. ಶಾಸಕರು ಈ ರಸ್ತೆಗಳನ್ನು ಪರಿಶೀಲಿಸಿ ಇನ್ನು ಮುಂದೆ ಈ ಕಳಪೆಯಾಗಿರುವಂತ ರಸ್ತೆಗಳಿಗೆ ಹಣ ಬಿಡುಗಡೆ ಮಾಡಿದಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದೆ. ಇಂಜಿನಿಯರ್ ಗಳಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡಿದೆ. ರಸ್ತೆ ವೀಕ್ಷಣೆ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ಗೌಡಳ್ಳಿ
ನವದುರ್ಗಾಪರಮೇಶ್ವರಿ ದೇವಾಲಯದ ಸಮುದಾಯ ಭವನದ ಅಧ್ಯಕ್ಷ ಮಹೇಶ್ ಹಾಗೂ ರಾಮನಹಳ್ಳಿ ಕರವೇ ಉಪಾಧ್ಯಕ್ಷ ರಕ್ಷಿತ್ ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು