News Karnataka Kannada
Monday, April 29 2024
ಮಡಿಕೇರಿ

ಗಡಿನಾಡು ಗ್ರಾಮದಲ್ಲಿ ಮೇಳಯಿಸಿದ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Virajpet Taluk Kannada Sahitya Sammelana held at Gadinadu village
Photo Credit : By Author

ವಿರಾಜಪೇಟೆ: ಗಡಿನಾಡು ಎಂದು ಖ್ಯಾತಿಗಳಿಸಿರುವ ವಿರಾಜಪೇಟೆ ತಾಲೂಕಿನ ಆರ್ಜಿ ಮತ್ತು ಬೇಟೋಳಿ ಗ್ರಾಮಗಳ ಸಂಗಮದಲ್ಲಿ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ವಿವಿಧ ಜಾನಪದ ಕಲಾತಂಡಗಳ ಮೆರುಗಿನೊಂದಿಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೯ ನೇ ಸಮ್ಮೇಳನದ ಅಧ್ಯಕ್ಷರಾಗಿ ಪಕ್ಷಿತಜ್ಷ, ವೈದ್ಯರು ಆದ ಡಾ. ನರಸಿಂಹನ್ ಅವರು ಕಂಗೊಳಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾಗೂ ಕಲಾತಂಡಗಳ ಮೆರವಣ ಗೆಗೆ ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಪೇಂದ್ರ ಅವರು ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಬೇಟೋಳಿ ಪಂಚಾಯಿತಿ ಕಚೇರಿ ಮುಂಭಾಗದಿಂದ ಹೊರಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದವರೆಗೆ ಸಾಗಿ ಬಂತು. ಸಮ್ಮೇಳನಾಧ್ಯಕ್ಷರಿಗೆ ಮೆರವಣಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್, ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಸಾಥ್ ಕೊಟ್ಟರು .

ವಿವಿಧ ಮಂಗಳವಾದ್ಯಗಳ ಮೂಲಕ ಪ್ರಾರಂಭಗೊಂಡ ಮೆರವಣಗೆಗೆಯಲ್ಲಿ ಬದ್ರಿಯಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಾಗೂ ಶಂಸುಲ್ ಉಲಮಾ ಶಾಲೆಯ ಸ್ಥಬ್ದಚಿತ್ರ ಜನಮನ ಸೆಳೆಯಿತು.

ಆರ್ಜಿ ಮತ್ತು ಬೇಟೋಳಿ ಗ್ರಾಮದ ಶಾಲಾ ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಸದಸ್ಯರು. ಸಮಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

ಜನಮನ ಸೆಳೆದ ಮೆರವಣಿಗೆ
ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣ ಹಾಗೂ ಗ್ರಾಮದ ಮುಖ್ಯರಸ್ತೆಗಳು ನವ ವಧುವಿನಂತೆ ಸಿಂಗಾರಗೊಂಡಿತ್ತು.

ಅದ್ದೂರಿ ಮೆರವಣಿಗೆಗೆ ಕಲಾತಂಡಗಳು ಸಾಥ್ ನೀಡಿತು. ಈ ವರ್ಣರಂಜಿತ ಮೆರವಣಗೆಯಲ್ಲಿ ಡೊಳ್ಳು ಕುಣ ತ, ವೀರಗಾಸೆ, ಕೋಲಾಟ, ಮಂಗಳವಾದ್ಯ, ಚಂಡೆ, ಕಳಸಗಳು, ಕಂಸಾಳೆ, ಪೂಜಾ ಕುಣ ತ, ನಂದಿ ಧ್ವಜ, ದಫ್, ಕೊಡಗಿನ ವಾ¯ಗ, ಬ್ಯಾಂಡ್ ಸೆಟ್, ಕಲಾ ತಂಡಗಳು ಮೆರವಣಗೆಗೆ ಮೆರುಗು ನೀಡಿತು.

ಗ್ರಾಮದಲ್ಲಿ ಹಬ್ಬದ ವಾತಾವರಣವೇ ತುಂಬಿದ್ದು ಗ್ರಾಮದ ರಸ್ತೆಗಳು ಕಳೆದುಂಬಿ, ಕನ್ನಡದ ಧ್ವಜಗಳು ಹಾರಾಡುತ್ತಿತ್ತು. ರಸ್ತೆಗಳ ಅಕ್ಕಪಕ್ಕ ಹಾಗೂ ವೇದಿಕೆ ಬಳಿ ಬ್ಯಾನರ್, ಬಂಟಿಗ್ಸ್ ರಾರಾಜಿಸಿ ಗ್ರಾಮ ಕನ್ನಡಮಯವಾಗಿ ಕಂಗೊಳಿಸಿತ್ತು.

ಮೆರವಣಿಗೆ ಸಾಗಿದ ದಾರಿಯುದ್ಧಕ್ಕೂ ಕನ್ನಡದ ಕಂಪು ಹರಡಿತು. ಹಳದಿ-ಕೆಂಪು ರಂಗಿನ ಕನ್ನಡದ ಬಾವುಟ ಹಿಡಿದವರು, ಸಾಲನ್ನು ಹೆಗಲಿಗೆರಿಸಿಕೊಂಡವರು, ವಿವಿಧ ಕಲಾ ತಂಡಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣ ಗೆಯಲ್ಲಿ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಕಲಾತಂಡಗಳ ಮೂಲಕ ಗಮನ ಸೆಳೆದರೆ ಮತ್ತೊಂದು ಕಡೆ ಸಾರ್ವಜನಿಕರು ಮೆರವಣಿಗೆಯನ್ನು ಮೊಬೈಲ್‌ನಲ್ಲಿ ಸರೆ ಹಿಡಿಯುವಲ್ಲಿ ತಲ್ಲಿನರಾಗಿದ್ದರು.

ಸಮ್ಮೇಳನಕ್ಕೆ ಬಂದಿದ್ದ ಸಾಹಿತ್ಯಾಭಿಮಾನಿಗಳಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಗೆ ಮುನ್ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಬೆಳಗ್ಗೆ ರಾಷ್ಟç ಧ್ವಜಾರೋಹಣವನ್ನು ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಬಿ. ಪಾರ್ವತಿ ಹಾಗೂ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋಧ ಮಾಡಿದರೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ಹಾಗೂ ಕನ್ನಡ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಎಂಪಿ ಕೇಶವ ಕಾಮತ್ ಮಾಡಿದರು.

ಬಳಿಕ ಏಕಕಾಲದಲ್ಲಿ ದ್ವಾರಗಳ ಉದ್ಘಾಟನೆ ನಡೆಯಿತು. ಕೋದಂಡ ಲೆಫ್ಟಿನೆಂಟ್ ಜನರಲ್ ಕೋದಂಡ ನಂಜಪ್ಪ ಸೋಮಣ್ಣ ದ್ವಾರವನ್ನು ಬೇಟೋಳಿ ಪಂಚಾಯಿತಿ ಸದಸ್ಯ ಟಿ. ಜೋಸೇಫ್, ಆರ್ಜಿ ಪಂಚಾಯಿತಿ ಸದಸ್ಯೆ ಫಾತೀಮಾ ಉದ್ಘಾಟಿಸಿದರು.
ಮೇಜರ್ ಜನರಲ್ ಸೋಮೆಯಂಡ ಕಾಳಪ್ಪ ಕಾರ್ಯಪ್ಪ(ಪೆರುಂಬಾಡಿ ಚೆಕ್‌ಪೋಸ್ಟ್)ಬಳಿ ದ್ವಾರವನ್ನು ಪಂಚಾಯಿತಿ ಸದಸ್ಯರಾದ ಎ.ಎಂ. ಬೋಪಣ್ಣ, ಪಿ.ಕೆ. ಗೀತಾ ಉದ್ಘಾಟಿಸಿದರು.

ಕೊಡಗಿನ ಗೌರಮ್ಮ ದ್ವಾರ, ಕೊಡಗಿನ ಪ್ರಥಮ ಮಹಿಳಾ ಸಾಹಿತಿ (ಕಂಡಿಮಕ್ಕಿ ದೇವಸ್ಥಾನಕ್ಕೆ ಹೋಗುವ ದಾರಿ) ದ್ವಾರವನ್ನು ಪಂಚಾಯಿತಿ ಸದಸ್ಯರಾದ ಪಿ.ಬಿ. ಚಂಗಪ್ಪ, ಆಲೀಮಾ ಉದ್ಘಾಟಿಸಿದರು.

ಹರದಾಸ ಅಪ್ಪಚ್ಚ ಕವಿ ದ್ವಾರ (ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯ ದ್ವಾರ)ವನ್ನು ಪಂಚಾಯಿತಿ ಸದಸ್ಯರಾದ ಲತಾ ಹಾಗೂ ಕವಿತಾ ಉದ್ಘಾಟಿಸಿದರೆ, ಐ. ಮಾ. ಮುತ್ತಣ್ಣ ಸಭಾಂಗಣ ವೇದಿಕೆಯನ್ನು ಪಂಚಾಯಿತಿ ಸದಸ್ಯರಾದ ಸುನೀತಾ, ರಂಜಿತ್ ಉದ್ಘಾಟಿಸಿದರು. ರಘುನಾಥ್ ನಾಯಕ್ ವೇದಿಕೆಯನ್ನು ಪಂಚಾಯಿತಿ ಸದಸ್ಯರಾದ ಸುಧೀಶ್, ಬೋಪಣ್ಣ ಉದ್ಘಾಟಿಸಿದರು.

ಪುಸ್ತಕ ಮಳಿಗೆಯನ್ನು ಬೇಟೋಳಿ ಪಂಚಾಯಿತಿ ಉಪಾಧ್ಯಕ್ಷೆ ಶಾಂತಿ ಹಾಗೂ ಪಟ್ರಪಂಡ ಸುಬ್ರಮಣ , ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮಳಿಗೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಎಂ.ಎಸ್. ಪೂವಯ್ಯ, ಬೃಹತ್ ನಾಣ್ಯ ಮತ್ತು ನೋಟುಗಳ ಪ್ರದರ್ಶನ ಮಳಿಗೆಯನ್ನು ಗ್ರಾಮ ಪಂಚಾಯತ್ ಸದಸ್ಯ ವಸಂತ್ ಕಟ್ಟಿ ಉದ್ಘಾಟಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು