Categories: ಮಡಿಕೇರಿ

ಸೋಮವಾರಪೇಟೆ: ಆಧ್ಯಾತ್ಮದಿಂದ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯ ಎಂದ ಶಂಭುನಾಥ ಸ್ವಾಮೀಜಿ

ಸೋಮವಾರಪೇಟೆ: ವಿಜ್ಞಾನ, ತಂತ್ರಜ್ಞಾನ ಮುಂದುವರಿದರೂ ಆಧ್ಯಾತ್ಮದಿಂದ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯವೆಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಸೋಮವಾರಪೇಟೆ ಸಮೀಪದ ತಪೋಕ್ಷೇತ್ರ ಮನೆ ಹಳ್ಳಿ ಮಠದಲ್ಲಿ ಆಯೋಜಿಸಲಾಗಿದ್ದ 21ನೇ ವರ್ಷದ 25 ಸಹಸ್ರ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದಿರಬಹುದು ಅದರಿಂದ ನೆಮ್ಮದಿ ಸಿಗುವುದಿಲ್ಲ. ಆಸ್ತಿ, ಅಂತಸ್ತಿ ಗಿಂತ ಮನಸಂತೋಷ ಮುಖ್ಯ. ಮನುಷ್ಯ ಮಾನಸಿಕವಾಗಿ ನೆಮ್ಮದಿ ಕಾಣಬೇಕಾದರೆ ಆಧ್ಯಾತ್ಮಿಕವಾಗಿ ದೇವರ ಮೊರೆ ಹೋಗಲೇಬೇಕು ಎಂದರು.
ಭಕ್ತಿ, ಶ್ರದ್ಧೆ, ನಿಷ್ಟೆಯೊಂದಿಗೆ ಸಮರ್ಪಣಾ ಭಾವನೆ ಇರಬೇಕು ಎಂದ ಅವರು ಬದುಕಿನಲ್ಲಿ ಸಮಾಜಕ್ಕೆ ಅನುಕೂಲವಾಗುವ ಕೆಲಸ ಮಾಡಿ, ನಾನು ನಾನೆಂಬ ಅಹಂ ಬೇಡವೆಂದರು. ಮಾನವ ಜನ್ಮ ದೊಡ್ಡದು ಪ್ರಕೃತಿ ಋಣ ನಮ್ಮಮೇಲಿದೆ ಅದನ್ನು ಉಳಿಸಿ, ಬೆಳೆಸಬೇಕಾದ ಕರ್ತವ್ಯ ನಮ್ಮದು ಎಂದರು.

ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿದ್ದ ಮನೆ ಹಳ್ಳಿ ಮಠದೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಕ್ಷೇತ್ರದಲ್ಲಿ ದೇವಾಲಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಭಕ್ತರ ಸಹಕಾರ ಬೇಕೆಂದರು. ಪ್ರತಿ ತಿಂಗಳು ನಡೆಯುವ ಪೂಜೆ ಉತ್ಸವಗಳಲ್ಲಿ ಪಾಲ್ಗೊಳ್ಳಿ ಆ ಮೂಲಕ ಭಗವಂತನ ಸೇವೆ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಕೆಸವತ್ತುರು ಮಠದ ಬಸವರಾಜೆಂದ್ರ ಸ್ವಾಮೀಜಿ, ಹಾಸನ ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮುದ್ದಿನ ಕಟ್ಟೆ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಚಿಕ್ಕ ಬಳ್ಳಾಪುರದ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ, ಬೆಂಗಳೂರು ಸೆಷನ್ ಕೋರ್ಟ್ ನ ನ್ಯಾಯಾದಿಶರಾದ ಜಯಶ್ರೀ, ವಿರಾಜಪೇಟೆಯ ವೈದ್ಯರಾದ ಡಾ.ಬೋಪಣ್ಣ, ಪ್ರಮುಖರಾದ ಜ್ಞಾನೇಶ್ವರಿ, ಮಾಗೋಡು ಬಸವರಾಜು ಹಾಗೂ ಮುಂತಾದವರು ಮತ್ತಿತರ ಗಣ್ಯರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಗೀತಗಾಯನ ತಂಡದವರ ಭಕ್ತಿಗೀತೆ ಗಾಯನ ಗಮನ ಸೆಳೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೀಪೋತ್ಸವದಲ್ಲಿ ದೀಪಬೇಳಗಿದರು.

Ashika S

Recent Posts

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.  ಗುಟ್ಕಾ, ಎಲೆಅಡಿಕೆ, ತಂಬಾಕು ಅಗೆಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು…

12 mins ago

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು…

35 mins ago

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

53 mins ago

ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…

57 mins ago

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

1 hour ago

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

2 hours ago