News Karnataka Kannada
Wednesday, May 01 2024
ಮಡಿಕೇರಿ

 ವಿಧಾನ ಪರಿಷತ್ ಸದಸ್ಯ ಕೆ. ಜಿ. ಬೋಪಯ್ಯ ವಿರುದ್ಧ ದೂರು ದಾಖಲು!

 Member of Legislative Council K. G. A complaint has been filed against Bopaiah.
Photo Credit : News Kannada

ಮಡಿಕೇರಿ : ಹಾಲಿ ವಿಧಾನ ಸಭಾ ಸದಸ್ಯರಾದ ಕೆ. ಜಿ. ಬೋಪಯ್ಯನವರು ಚುನಾವಣಾ ಆಯೋಗಕ್ಕೆ ತಮ್ಮ ವಯಸ್ಸನ್ನು ತಿದ್ದಿ ತಪ್ಪುಮಾಹಿತಿ ನೀಡಿ ಚುನಾವಣೆ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದರೆಂದು ವ್ಯಕ್ತಿಯೊಬ್ಬರು ವಿರಾಜಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ದೂರನ್ನು ದಾಖಲಿಸಿದ್ದಾರೆ.

ದೂರಿನಲ್ಲಿ ವಿರಾಜಪೇಟೆ ಕ್ಷೇತ್ರದ ವಿಧಾನ ಸಭಾ ಸದಸ್ಯರಾದ ಕೆ. ಜಿ. ಬೋಪಯ್ಯ ಎಂಬುವವರು 26.10.1979 ರಲ್ಲಿ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿದ್ದು ಅವರು ಆಗ ತಮ್ಮ ಹುಟ್ಟಿದ ದಿನಾಂಕವನ್ನು 1951 ಅಕ್ಟೋಬರ್ 17 ಎಂದು ದಾಖಲಿಸಿರುತ್ತಾರೆ.

ಆದರೆ ಬೋಪಯ್ಯನವರು 2004 ನೇ ಸಾಲಿನ ಚುನಾವಣೆ ಸಮಯದಲ್ಲಿ ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ 53 ವರ್ಷ ಆಗಿದ್ದು, ಆದರೆ ಬೋಪಯ್ಯನವರು ತಮ್ಮ ವಯಸ್ಸನ್ನು 49 ವರ್ಷ ಎಂದು ಸುಳ್ಳು ಮಾಹಿತಿ ದಾಖಲಿಸಿದ್ದು , ಅಲ್ಲದೆ 2013 ನೇ ಸಾಲಿನ ಚುನಾವಣೆಯಲ್ಲಿ ಅವರ ವಯಸ್ಸು ಜನ್ಮ ದಿನಾಂಕದ ಅನುಗುಣವಾಗಿ 61 ವರ್ಷ ಆಗಿದ್ದು , ಆದರೆ ಅವರು ಚುನಾವಣೆ ಆಯೋಗಕ್ಕೆ ಅವರ ವಯಸ್ಸನ್ನು 58 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದು , ಅದು ಅಲ್ಲದೆ 2018 ನೇಯ ಚುನಾವಣೆಯಲ್ಲಿ ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ 67 ಆಗಿದ್ದು ಆದರೆ ಬೋಪಯ್ಯ ನವರು ಚುನಾವಣೆ ಆಯೋಗಕ್ಕೆ ತಮ್ಮ ವಯಸ್ಸನ್ನು 65 ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ದೂರುದಾರರಾದ ಪಿ. ಬಿ. ತಿಮ್ಮಯ್ಯ ನವರು ಆರೋಪಿಸಿದ್ದಾರೆ.

ಇದು ಚುನಾವಣೆ ನೀತಿ ಸಂಹಿತೆ ಅನುಗುಣವಾಗಿ ಗಂಭೀರ ಅಪರಾಧವಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಇದಕ್ಕೆ ಸಂಬಂಧಪಟ್ಟ ವಿವಿಧ ಇಲಾಖೆಗಳಿಗೆ ದೂರನ್ನು ಸಹ ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು