Categories: ಮಡಿಕೇರಿ

ಮಾರಕ ಆಯುಧ ಹಿಡಿದು ಮಧ್ಯರಾತ್ರಿ ಕೇರಳ ಹುಡುಗರ ಪುಂಡಾಟ: ನಾಯಿಗಳ ಮೇಲೆ ಮುಚ್ಚು ಬೀಸಿ ಕ್ರೌರ್ಯ

ಕೊಡಗು: ಕೇರಳ ರಾಜ್ಯದ ಹಲವು ಯುವಕರು ಇದೀಗ ರಾತ್ರಿ ೧೧ ಗಂಟೆಯ ನಂತರ ಗಡಿ ಭಾಗವಾದ ಮಾಕ್ಕೂಟ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ವಾರಕ್ಕೆ ೨ ಬಾರಿ ಪ್ರವೇಶಿಸಿ ಪೆರುಂಬಾಡಿ ತನಕ ಬಂದು ರಾತ್ರಿ ೪ ರ ಬೆಳಗ್ಗಿನ ಜಾವ  ಹಿಂತಿರುಗುತ್ತಿದ್ದಾರೆ.

ಕೆಲವು ಹುಡುಗರ ವಾಹನದಲ್ಲಿ ಮಾರಕ ಆಯುಧಗಳು ಕೂಡ ಇರುತ್ತದೆ ಎಂದು ಅ ಭಾಗದ ಜನರು ಹೇಳುತ್ತಾರೆ.. ಇದು ಕಳೆದ ೧ ವರ್ಷದಿಂದ ನಡೆಯುತ್ತಿದ್ದರೂ  ಚೆಕ್ಪೋಸ್ಟ್ ನಲ್ಲಿ ಇರುವ ಪೊಲೀಸರು ಹಲವು ಬಾರಿ ಇವರುಗಳಿಗೆ ಎಚ್ಚರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವರನ್ನು ಪ್ರಶ್ನೆಸಿದರೆ ರಾತ್ರಿ ಕೇರಳದಲ್ಲಿ ತುಂಬಾ ಬಿಸಿ ಇರುವುದರಿಂದ ತಣ್ಣಗೆ ಗಾಳಿ ಸೇವಿಸಲು ಬರುವುದಾಗಿ ಹೇಳುತ್ತಾರೆ.

ತಂಡೊಪ್ಪ ತಂಡವಾಗಿ ದ್ವಿಚಕ್ರ ವಾಹನದಲ್ಲಿ ಬರುವ ಇವರು ಕಣ್ಣೂರ್ ಇರ್ರಿಟಿ, ಮಟ್ಟನೋರ್,ಭಾಗದ ಪುಂಡ ಹುಡುಗರು ಇವರಾಗಿದ್ದು, ಈ ಹಿಂದೆ ಇರ್ರಿಟಿ, ವಲಿತೋಡು ರಸ್ತೆಗಳಲ್ಲಿ ಓಡಾಡುವ ಬೀದಿ ನಾಯಿಗಳು ರಸ್ತೆಯಲ್ಲಿ ಕುತ್ತಿಗೆ, ಬೆನ್ನು ಭಾಗಕ್ಕೆ ಕಡಿದ ಗಾಯಗಳಿಂದ ಹಲವಾರು ನಾಯಿಗಳು ಸಾವನಪ್ಪಿದು ಈ ಬಗ್ಗೆ ಅಲ್ಲಿನ ಪತ್ರಿಕೆಗಳಲ್ಲಿ ಸುದ್ಧಿ ಪ್ರಕಟಗೊಂಡಿದೆ.

ಮಾಕುಟಾ ಪ್ರದೇಶವು ರಕ್ಷಿತ ಅರಣ್ಯ ವಾಗಿದ್ದು, ಅರಣ್ಯ ಇಲಾಖೆ ಕೂಡ ಗಮನ ಹರಿಸಬೇಕಾಗಿದೆ. ಜಿಲ್ಲಾ ಪೊಲೀಸ್ ಸಮಗ್ರ ಮಾಹಿತಿ ಪಡೆದು ಸೂಕ್ತ ಕ್ರಮ ಜಾರಿಗೊಳಿಸದ್ದಿದರೆ ಮುಂದೆ ಹೆಚ್ಚಿನ ಅನಾಹುತಕ್ಕೆ ಕಾರಣವಗಬಹುದು.

Gayathri SG

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

4 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

4 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

5 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

5 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

5 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

6 hours ago