Categories: ಮಡಿಕೇರಿ

ಮಡಿಕೇರಿ: ಅಭಿ ಫಾಲ್ಸ್ ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯ ವರ್ತಕರು, ಸುಂಕ ವಸೂಲಿಗಾರರಿಂದ ಹಲ್ಲೆ

ಮಡಿಕೇರಿ: ಮಡಿಕೇರಿ ಅಬ್ಬಿ ಫಾಲ್ಸ್ ನಲ್ಲಿ ಶನಿವಾರ ಪ್ರವಾಸಕ್ಕೆಂದು ಬಂದ ಪ್ರವಾಸಿಗರ ಮೇಲೆ ಕ್ಷುಲಕ ಕಾರಣಕ್ಕೆ ದೊಣ್ಣೆ ಹಾಗೂ ಕೈಗಳಿಂದ ಸ್ಥಳೀಯ ಅಂಗಡಿ ಮಾಲೀಕರು ಹಾಗೂ ಸುಂಕ ವಸಲಿಗಾರರು ಹಲ್ಲೇ ನಡೆಸಿದ ಘಟನೆಯ ವಿಡಿಯೋ ಈಗ ವೈರಲ್‌ ಆಗುತ್ತಿದೆ. ಕಳೆದ ಒಂದು ವಾರದ ಹಿಂದೆ ಆಟೋ ಡ್ರೈವರ್ ಒಬ್ಬರಿಗೂ ಕೂಡ ಇಲ್ಲಿ ಹಲ್ಲೆ ನಡೆಸಲಾಗಿತ್ತು.

ಹೀಗೆ ಹಲವು ಬಾರಿ ಪ್ರವಾಸಿಗರ ಮೇಲೆ ಇಲ್ಲಿನ ವರ್ತಕರು ಹಲ್ಲೆ ನಡೆಸುತ್ತಿದ್ದಾರೆ ಎಂಬ ಆರೋಪ ಆಗಾಗ ಕೇಳಿ ಬರುತ್ತಿದ್ದರು ಜಿಲ್ಲಾಡಳಿತ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಪ್ರವಾಸಿ ಜಿಲ್ಲೆ ಕೊಡಗಿಗೆ ಪ್ರವಾಸಿಗರು ಬರದಂತೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದೂರದ ಊರಿಂದ ಬಂದ ಪ್ರವಾಸಿಗರು ಹಲ್ಲೆಗೊಳಗಾಗಿ ದೂರು ನೀಡದೆ ತೆರಳುತ್ತಾರೆ ಕಾರಣ ದೂರು ನೀಡಿದರೆ ಮತ್ತೆ ಪುನಃ ಇಲ್ಲಿಯ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗಬೇಕಾದ ಕಷ್ಟದಿಂದ ಇದುವರೆಗೂ ಹಲ್ಲೆಗೋಳಗಾದ ಪ್ರವಾಸಿಗಳು ನೇರವಾಗಿ ದೂರು ನೀಡಿಲ್ಲ. ಇದರ ಲಾಭವನ್ನು ಪಡೆದ ವರ್ತಕರು ದುಪ್ಪುಟ್ಟು ಬೆಲೆಗೆ ಸಾಮಗ್ರಿಗಳನ್ನು ಮಾರಾಟ ಮಾಡಿ ಪ್ರವಾಸಿಗರು ಪ್ರಶ್ನಿಸಿದಾಗ ಅವರ ಮೇಲೆ ನೇರವಾಗಿ ಹಲ್ಲೆ ನಡೆಸಿ ಬೆದರಿಕೆ ಒಡುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ.

ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಂತೂ ಆಟಕುಂಟು ಲೆಕ್ಕಕ್ಕಿಲ್ಲ. ಪೊಲೀಸ್ ಇಲಾಖೆ ನಮಗೆ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಅವರು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಹೀಗಾದರೆ ಕೊಡಗು ಜಿಲ್ಲೆಗೆ ಇನ್ನೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವ ಸಂಭವವಿದೆ ಈಗಾಗಲೇ ಇಂತ ಪ್ರಕರಣಗಳ ವಿಡಿಯೋಗಳು ಹರಿದಾಡುತ್ತಿದ್ದು ಪ್ರವಾಸಿಗರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಜಿಲ್ಲಾಡಳಿತ ಇದಕ್ಕೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಿದ್ದರೆ ಮುಂದಾಗುವ ಅನಾಹುತಕ್ಕೆ ಅವರೇ ಜವಾಬ್ದಾರಾಗಬೇಕಾಗುತ್ತದೆ.

Gayathri SG

Recent Posts

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

5 hours ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

6 hours ago

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ್‌

'ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ…

6 hours ago

ನಾಳೆಯಿಂದ ಪಿಯುಸಿ 2ನೇ ವಾರ್ಷಿಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಫ್ರೀ

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಏಪ್ರಿಲ್ 29 ರಿಂದ ಮೇ…

6 hours ago

ಸೆಲ್ಫಿ ತೆಗೆಯುವಾಗ ಕೆರೆಗೆ ಬಿದ್ದ ಮಗಳು : ಕಾಪಾಡಲು ಹೋದ ತಂದೆಯೂ ಸಾವು

ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ…

6 hours ago

ಯತ್ನಾಳ್ ಬಾಯಿ, ಬೊಂಬಾಯಿ : ಸಚಿವ ಎಂ.ಬಿ‌.ಪಾಟೀಲ್ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ, ಬೊಂಬಾಯಿ. ಅವ್ರು, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಮಲಗಿ ಎಚ್ಚರಾದ್ಮೇಲೆ ಒಂದು ಹೇಳ್ತಾರೆ. ಇವ್ರ ಮಾತನ್ನ…

7 hours ago