ಮಡಿಕೇರಿ

ಮಡಿಕೇರಿ: ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗಾಗಿ ಕೊಡಗಿನಲ್ಲಿ ಓಜಸ್ವಿ ಫೌಂಡೇಶನ್ ಅಸ್ತಿತ್ವಕ್ಕೆ

ಮಡಿಕೇರಿ: ಗ್ರಾಮೀಣ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಕಲ್ಪಿಸುವ ನಿಟ್ಟಿನಲ್ಲಿ ಓಜಸ್ವಿ ಫೌಂಡೇಶನ್ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಕಾರ್ಯಕ್ರಮ ಶುಕ್ರವಾರ (ನ.೧೮) ನಡೆಯಲಿದೆ ಎಂದು ಫೌಂಡೇಶನ್ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಕವಿತಾ ಪಿ.ಸಿ. ತಿಳಿಸಿದ್ದಾರೆ.

ಅಂದು  ಬೆಳಗ್ಗೆ ಮೂರ್ನಾಡಿನ  ಸರಕಾರಿ ಪ್ರೌಢಶಾಲೆಯಲ್ಲಿ ಮತ್ತು ಮಧ್ಯಾಹ್ನ ನಂತರ ಹಾಕತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳ ಉನ್ನತಿಗೆ ಗೆಲುವಿನ ಸೂತ್ರಗಳು, ವಿಜ್ಞಾನ, ತಂತ್ರಜ್ಞಾನದ ವಿಚಾರ ಹಾಗೂ ರೊಬೊಟಿಕ್ಸ್ ಪ್ರದರ್ಶನ ಒಳಗೊಂಡಿದೆ. ಡಾ. ಕವಿತಾ ಪಿ.ಸಿ. ಮತ್ತು ಬೆಂಗಳೂರಿನ ಜಸ್ಟ್ ರೋಬೋಟಿಕ್ಸ್ನ ಸಿ.ಇ.ಓ. ಬ್ರಿಜೇಶ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜಗತ್ತು ತಾಂತ್ರಿಕತೆಯಿಂದಾಗಿ ಶೀಘ್ರವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಸವಾಲುಗಳು ಕೂಡ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ವ್ಯವಸ್ಥೆ ತನ್ನದೇ ಮಹತ್ವದ ಸ್ಥಾನವನ್ನು ಪಡೆದಿದೆ. ಆದ್ದರಿಂದ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅರಿವು ಮೂಡಿಸುವುದು ಓಜಸ್ವಿ ಫೌಂಡೇಶನ್ ಮುಖ್ಯ ಧ್ಯೇಯವಾಗಿದೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಶಾಲಾ ವಿದ್ಯಾರ್ಥಿಗಳ ಗುರಿ ಸಾಧನೆಗೆ ನೆರವಾಗಲು ಟ್ರಸ್ಟ್ ಕಾರ್ಯಪ್ರವೃತ್ತವಾಗಿದೆ.

ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಕೌಶಲ್ಯ ಅಭಿವೃದ್ಧಿ ನೀಡಿ, ಅವರ ಗುರಿ ಸಾಧನೆಗೆ ಪ್ರೇರಣೆ ಪ್ರೋತ್ಸಾಹವನ್ನು ನೀಡಲು ಓಜಸ್ವಿ ಫೌಂಡೇಶನ್ ನಿರ್ಧರಿಸಿದೆ. ಈ ಫೌಂಡೇಶನ್ ಸಂಸ್ಥಾಪಕರಾಗಿರುವ ಇಂಜಿನಿಯರ್ ಮತ್ತು ವೃತ್ತಿ ಶಿಕ್ಷಣ ತಜ್ಞರಾದ ಡಾ. ಕವಿತಾ.ಪಿ.ಸಿ ಹಾಗೂ ವಿಜಿತಾ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಾ. ಕವಿತಾ ತಿಳಿಸಿದ್ದಾರೆ.

Sushma K

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

3 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

4 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

4 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

4 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

5 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

5 hours ago