News Karnataka Kannada
Saturday, May 04 2024
ಮಡಿಕೇರಿ

ಮಡಿಕೇರಿ: ಪ್ರಕೃತಿ ಆರಾಧನೆಯ ಮಹತ್ವ ಅರಿವಾಗುತ್ತಿದೆ- ಅಪ್ಪಚ್ಚುರಂಜನ್

Madikeri: I am realising the importance of nature worship: Appachuranjan
Photo Credit : By Author

ಮಡಿಕೇರಿ: ಕೊಡಗಿನ ಜನ ಹಿಂದಿನಿಂದಲೂ ಪ್ರಕೃತಿಯನ್ನು ಆರಾಧಿಸಿಕೊಂಡು ಬರುತ್ತಿರುವವರು. ನಮ್ಮಆಚರಣೆಯನ್ನು ಹೊರಗಿನ ಮಂದಿ ಈ ಮೊದಲೆಲ್ಲ ಲೇವಡಿ ಮಾಡುತ್ತಿದ್ದರು. ಆದರೆ ಈಗ ಪ್ರಕೃತಿಯ ಆರಾಧನೆಯ ಮಹತ್ವ ಎಲ್ಲರಿಗೂ ಅರಿವಾಗುತ್ತಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಜೀವ ವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತುಔಷಧಿ ಸಸ್ಯ ಸಂಪತ್ತಿನ ಕುರಿತು ಮಡಿಕೇರಿಯಲ್ಲಿ ನಡೆದ ಮಾಹಿತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಈ ಮೊದಲೆಲ್ಲ ನಮ್ಮವರು ನೈಸರ್ಗಿಕ ಆಹಾರವನ್ನು ಸೇವಿಸುತ್ತಿದ್ದರು. ಹೀಗಾಗಿ ಅಂದಿನ ಮಕ್ಕಳು ಗಟ್ಟಿಮುಟ್ಟಾಗಿ ಬೆಳೆಯುತ್ತಿದ್ದರು. ಈಗ ಕೃತಕ ಆಹಾರ ಸೇವನೆಯಿಂದಾಗಿ ಅಸಹಜ ಬೆಳವಣಿಗೆ ಕಾಣಬಹುದು. ನಮ್ಮಆರೋಗ್ಯ ಉತ್ತಮವಾಗಿರಲು ಸಾವಯವ ದತ್ತ ಹೆಚ್ಚಿನ ಆಸಕ್ತಿ ವಹಿಸುವಂತೆಕರೆ ನೀಡಿದರು.

ಆಯುರ್ವೇದ ಔಷಧಿ ಬಳಸಿದರೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಔಷಧೀಯ ಸಸ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ಕೊಡಗಿನಲ್ಲಿಔಷಧೀಯ ಸಸ್ಯಗಳ ಪಾರ್ಕ್ ನಿರ್ಮಾಣಕ್ಕೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕೆಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎ. ಸುದರ್ಶನ್ ಮಾತನಾಡಿ, ಭಾರತೀಯರು ಆಯುರ್ವೇದಿಂದ ಅಲೋಪತಿ ಕಡೆ ಹೋಗಿದ್ದೇವೆ. ವಿದೇಶಿಗರು ನಮ್ಮಆಯುರ್ವೇದದ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಔಷಧೀಯ ಸಸ್ಯಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡರವಿ ಕಾಳಪ್ಪ ಮಾತನಾಡಿ, ನಮಗೆ ನಮ್ಮ ಸುತ್ತಮುತ್ತ ತೋಟ, ಕಾಡುಗಳಲ್ಲಿ ಕಾಣ ಸಿಗುವ ಗಿಡಗಳ ಅನುಕೂಲದ ಬಗ್ಗೆ ತಿಳಿದಿಲ್ಲ. ಔಷಧಿ ಸಸ್ಯಗಳ ಪಾರ್ಕ್ ನಿರ್ಮಾಣ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಚರ್ಚಿಸಿ ಆದಷ್ಟು ಶೀಘ್ರದಲ್ಲಿ ಕಾರ್ಯರೂಪಕ್ಕೆತರಲು ಶ್ರಮಿಸಲಾಗುವುದೆಂದರು.

ಔಷಧಿ ಸಸ್ಯಗಳ ಸಲಹೆಗಾರ ಡಾ.ಎಂ.ಜೆ. ಪ್ರಭು ಸಭಾ ನಡಾವಳಿ ಮಂಡಿಸಿದರು. ಅಪರ ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿಅನಿತಎಸ್. ಅರೇಕಲ್, ಪೊನ್ನಂಪೇಟೆಅರಣ್ಯ ಮಹಾವಿದ್ಯಾಲಯದಡೀನ್ ಡಾ.ಸಿ.ಜಿ. ಕುಶಾಲಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸಾಮಾಜಿಕಅರಣ್ಯ ವಿಭಾಗದ ಪೂರ್ಣಿಮಾ ವೇದಿಕೆಯಲ್ಲಿದ್ದರು. ಕೆ.ಆರ್. ಪ್ರಸನ್ನಕಾರ್ಯಕ್ರಮ ನಿರೂಪಿಸಿದರು.

ಚಿತ್ರ :ಕರ್ನಾಟಕಜೀವ ವೈವಿಧ್ಯ ಮಂಡಳಿ ವತಿಯಿಂದಜೀವ ವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಔಷಧಿ ಸಸ್ಯ ಸಂಪತ್ತಿನ ಕುರಿತು ಮಡಿಕೇರಿಯಲ್ಲಿ ನಡೆದ ಮಾಹಿತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು