News Karnataka Kannada
Monday, April 29 2024
ಮಡಿಕೇರಿ

ವಸತಿ ಯೋಜನೆ: 72 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದ ಅಪ್ಪಚ್ಚು ರಂಜನ್

Appachu Ranjan distributes sanction letters to 72 beneficiaries
Photo Credit : News Kannada

ಮಡಿಕೇರಿ: ಮಡಿಕೇರಿ ನಗರದಲ್ಲಿ ವಸತಿ ಯೋಜನೆಯಡಿ 72 ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಶುಕ್ರವಾರ ವಿತರಿಸಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಯೋಜನೆಯ ಮಂಜೂರಾತಿ ಪತ್ರವನ್ನು ವಿತರಿಸಿದರು.
ಇದಕ್ಕೂ ಮೊದಲು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕರು, ವಿದ್ಯುತ್ ಸಂಪರ್ಕ, ಖಾತೆ ಬದಲಾವಣೆ, ಮಳೆಹಾನಿ ಪರಿಹಾರ, ಇಂದಿರಾ ಆವಾಸ್ ಯೋಜನೆಯಡಿ ಮನೆ ನಿರ್ಮಾಣ…, ಹೀಗೆ 7 ಅರ್ಜಿಗಳು ಬಂದಿದ್ದು, ವಿದ್ಯುತ್ ಸಂಪರ್ಕ ಮತ್ತು ಖಾತೆ ಬದಲಾವಣೆ ಸಂಬಂಧ 15 ದಿನದಲ್ಲಿ ಬಗೆಹರಿಸಲಾಗುವುದು. ಹಾಗೆಯೇ ಮಳೆಹಾನಿ ಪರಿಹಾರ ಸಂಬಂಧ ಪರಿಶೀಲಿಸಲು ತಹಶೀಲ್ದಾರರಿಗೆ ಸೂಚಿಸಲಾಗುವುದು. ಜೊತೆಗೆ ಇಂದಿರಾ ಅವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಲಾಗುವುದು ಎಂದರು.

ಮಡಿಕೇರಿ ನಗರಸಭೆ ವ್ಯಾಪ್ತಿಗೆ ನಗರೋತ್ಥಾನ ಯೋಜನೆಯಡಿ 40 ಕೋಟಿ ರೂ., 15 ನೇ ಹಣಕಾಸು ಯೋಜನೆಯಡಿ 1.48 ಕೋಟಿ ರೂ., ಹಾಗೆಯೇ ನಗರಸಭೆಯಿಂದ 1.15 ಕೋಟಿ ರೂ., ಹೀಗೆ ವಿವಿಧ ವಿಭಾಗದ ಅನುದಾನ ಬಿಡುಗಡೆಯಾಗಿದ್ದು, ಮಡಿಕೇರಿ ನಗರದ ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಆಗಿದೆ ಎಂದು ಶಾಸಕರು ವಿವರಿಸಿದರು.

‘ಮಡಿಕೇರಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ 20 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ನಗರಸಭೆಗೆ 20 ಕೋಟಿ, ಸೋಮವಾರಪೇಟೆ ಪ.ಪಂ.ಗೆ 35 ಕೋಟಿ ಮತ್ತು ಕುಶಾಲನಗರ ಪುರಸಭೆಗೆ 40 ಕೋಟಿ ರೂ. ಹೆಚ್ಚಿನ ಹಣ ಬಿಡುಗಡೆ ಆಗಿದೆ ಎಂದರು.

‘ಈಗಿರುವ ಕಾವೇರಿ ಕಲಾಕ್ಷೇತ್ರದ ಕಟ್ಟಡವನ್ನು ತೆರೆವುಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಒಂದು ಸಾವಿರ ಜನರು ಕುಳಿತುಕೊಳ್ಳುವ ಸುಸಜ್ಜಿತ ನೂತನ ಕಾವೇರಿ ಕಲಾಕ್ಷೇತ್ರ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ಅಪ್ಪಚ್ಚು ರಂಜನ್ ಅವರು ಹೇಳಿದರು.

ಸರ್ಕಾರದಿಂದ ಸ್ತ್ರೀಶಕ್ತಿ ಸಂಘಗಳಿಗೆ ವಾರ್ಡ್ ಒಂದಕ್ಕೆ 5 ಲಕ್ಷ ರೂ. ಸಹಾಯಧನ ಕಲ್ಪಿಸಲಾಗುತ್ತದೆ. ಹಾಗೆಯೇ ಯುವಕ ಸಂಘಗಳಿಗೂ 5 ಲಕ್ಷ ರೂ. ಸಹಾಯಧನ, ಹಾಗೆಯೇ ಕೇಂದ್ರ ಸರ್ಕಾರದಿಂದಲೂ ಹಲವು ಯೋಜನೆಗಳು ಲಭ್ಯವಿದ್ದು, ಇವುಗಳನ್ನು ಬಳಸಿಕೊಳ್ಳಬೇಕು ಎಂದರು.

ಅಂಚೆ ಕಚೇರಿಯಲ್ಲಿ ಹಲವು ವಿಮಾ ಸೌಲಭ್ಯಗಳಿದ್ದು, ಅದನ್ನು ಬಳಸಿಕೊಳ್ಳುವಂತಾಗಬೇಕು. ಕೌಶಲ್ಯಾಭಿವೃದ್ಧಿ ಯೋಜನೆಯಡಿ ಹಲವು ಸೌಲಭ್ಯ ಪಡೆಯುವಂತಾಗಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡ ಜನರ ಒಳಿತಿಗಾಗಿ ಕೆಲಸ ಮಾಡುತ್ತಿವೆ. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬ ಬಡವರೂ ಪಡೆಯುವಂತಾಗಬೇಕು ಎಂದು ಶಾಸಕರು ಹೇಳಿದರು.

ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ, ಸದಸ್ಯರಾದ ಕಲಾವತಿ, ಮಂಜುಳ, ಶಾರದ ನಾಗರಾಜ್, ಚಿತ್ರಾವತಿ, ಉಷಾ ಕುಮಾರಿ, ಸಬಿತಾ, ಮಹೇಶ್ ಜೈನಿ, ಸತೀಶ, ಅರುಣ್ ಶೆಟ್ಟಿ, ಕವನ್ ಕಾವೇರಪ್ಪ, ಪೌರಾಯುಕ್ತರಾದ ವಿಜಯ, ಇತರರು ಇದ್ದರು. ನಗರಸಭೆಯ ಸಿಎಒ ಶೈಲಾ ನಿರೂಪಿಸಿದರು. ಹೇಮಾ ಪ್ರಾರ್ಥಿಸಿದರು. ಎಇಇ ಸೌಮ್ಯ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು