News Karnataka Kannada
Saturday, April 27 2024
ಮಡಿಕೇರಿ

ಮಡಿಕೇರಿ ವಿಧಾನಸಭಾ ಕ್ಷೇತ್ರ: ಬಿಜೆಪಿಗೆ ಗೆಲುವು ಸುಲಭದ ಮಾತಲ್ಲ

elections-2023-madikeri-assembly-constituency
Photo Credit : By Author

ಮಡಿಕೇರಿ: ಕೊಡಗಿನಲ್ಲಿ ಬಿಸಿಲಿನ ಕಾವು ಎರುತ್ತಿದ್ದಂತೆ ಚುನಾವಣೆಯ ಕಾವು ಕೂಡ ಎರತೊಡಗಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಆಯಯಾ ಪಕ್ಷದ ಮತ್ತು ಪಕ್ಷೇತರರು ಉಮೆದಾರಿಕೆ ಸಲ್ಲಿಸಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಪ್ರಮುಖವಾಗಿ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ನಡೆಯಲಿದೆ. ಎಸ್. ಡಿ ಪಿ.ಐ. ತೆರೆಯಮರೆಯ ಕಸರತ್ತು ನಡೆಸಿದ್ದು ಇದರ ಲಾಭ ಬಿಜೆಪಿ ಪಾಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಸುಲಭ ಸಾಧ್ಯವಲ್ಲ . ಯುವ ಉತ್ಸಾಹಿ ವೈದ್ಯ ಮಂತರ್ ಗೌಡ ಮತದಾರರ ಮನ ಸೆಳೆಯುವಲ್ಲಿ ಬಾರಿ ತಂತ್ರಗಾರಿಕೆಯನ್ನು ನಡೆಸುತ್ತಿದ್ದಾರೆ. ಬಿಜೆಪಿ ಪರ ಹೆಚ್ಚು ಒಲವು ಮತದಾರರು ಹೊಂದಿದ್ದರು. ಈ ನಿಟ್ಟಿನಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಿದ್ದರೆ ಒಳಿತಿತ್ತು ಎಂಬ ಭಾವನೆ ಬಿಜೆಪಿ ಹಾಗೂ ಸಂಘ ಪರಿವಾರದ ಹಲವು ನಾಯಕರಿಗೆ ಇದೆ. ಇದು ಕೇವಲ ಮಡಿಕೇರಿ ಕ್ಷೇತ್ರ ಮಾತ್ರವಲ್ಲ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲೂ ಇದೆ.

ಈ ಭಾರಿ ವ್ಯಕ್ತಿಗತವಾಗಿ ಎರಡು ಕ್ಷೇತ್ರದ ಅಭ್ಯರ್ಥಿಗಳ ಮೇಲೆ ಪಾರಂಪರಿಕ ಬಿಜೆಪಿ ಮತದಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ ಹೊರತು ಬಿಜೆಪಿ ಮೇಲಲ್ಲ. ಈಗಾಗಲೇ ಹಲವರು ತಟಸ್ಥ ಧೋರಣೆಯನ್ನು ಅನುಸರಿಸಿದ್ದಾರೆ. ಇದರ ಲಾಭ ಕಾಂಗ್ರೆಸ್ಸಿಗಾಗುತ್ತಿದೆ. ಮಂತರ್ ಗೌಡ ಕೊಡಗಿನ ಅಳಿಯ ಹಾಗೆಯೇ ಸಾಕಮ್ಮನ ಕುಟುಂಬದವರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಡ ಈ ಬಾರಿ ಒಂದಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹಿರಿಯ ರಾಜಕಾರಣಿ ಜೀವಿಜಿಯವರು ಕೂಡ ಮಂತ್ರ ಗೌಡ ಅವರ ಪರ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ. ಅವರದೇ ವ್ಯಕ್ತಿಗತ 20000 ಕ್ಕೂ ಹೆಚ್ಚು ಮತ ಯಾರಿಗೂ ಒಲಿಯುತ್ತದೋ ಅವರು ಈ ಬಾರಿ ಗೆಲ್ಲುವುದಂತು ಖಂಡಿತ. ಜೆಡಿಎಸ್ ಅಭ್ಯರ್ಥಿ ಮುತ್ತಪ್ಪ ಕೂಡ ಸೋಮವಾರಪೇಟೆ ಭಾಗದಲ್ಲಿ ಪ್ರಾಬಲ್ಯ ಹೊಂದಿದ್ದಾರೆ . ಇವರು ಪಡೆಯುವ ಮತಗಳು ಕಾಂಗ್ರೆಸಿಗೆ ತೊಡಕುಂಟಾದರೂ ಈ ಬಾರಿ ಜಾತಿ ರಾಜಕಾರಣದಲ್ಲಿ ಅಪ್ಪಚು ರಂಜನ್ ಅವರಿಗೂ ಕೂಡ ಇವರು ಪಡೆಯುವ ಮತಗಳು ನಷ್ಟವಾಗಲಿದೆ.

ಇನ್ನು ಚಂದ್ರಮೌಳಿಯವರು ತಮ್ಮ ಜನಾಂಗ ಹೆಚ್ಚು ಇರುವ ಕೊಡ್ಲಿಪೇಟೆ ಶನಿವಾರ ಸಂತೆ ಭಾಗದಲ್ಲಿ ಹೆಚ್ಚು ಮತವನ್ನು ಕಾಂಗ್ರೆಸ್ ಪರ ಹಾಕಿದರೆ ಮಂತ್ರ ಗೌಡ ಅವರ ಗೆಲುವಿಗೆ ಸಹಕಾರಿಯಾಗಬಹುದು. ಐದು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅಪ್ಪಚು ರಂಜನ್ ಅವರಿಗೆ ಮತದಾರರ ಒಳ್ಳಮರ್ಮ ತಿಳಿದಿದ್ದು ಕೊನೆ ಮೂರು ದಿನಗಳ ಕಸರತ್ತು ಜಯ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಎಂದಿನಂತಲ್ಲ ಈ ಬಾರಿ ಪ್ರಬಲ ಪೈಪೋಟಿ ಕಾಂಗ್ರೆಸ್ ಕಡೆಯಿಂದ ಬರಲಿದ್ದು ಸೋತರೂ ಗೆದ್ದರೂ ಕಡಿಮೆ ಅಂತರ. ಈ ಕ್ಷೇತ್ರದಲ್ಲಿ ಬದಲಾವಣೆಯತ್ತ ಮತದಾರರು ಚಿತ್ತ ಹರಿಸುತ್ತಿದ್ದಾರೆ.

ಬಿಜೆಪಿಯಲ್ಲಿ ಅಭ್ಯರ್ಥಿಯ ಬದಲಾವಣೆಯಾಗಿ, ಅಪ್ಪಚು ರಂಜನ್ ಅವರ ಮುಂದಾಳತ್ವದಲ್ಲಿ ಚುನಾವಣೆ ನಡೆಸಿದ್ದರೆ ಬಿಜೆಪಿ ಸುಲಭವಾಗಿ ಗೆದ್ದು ಬೀಗುತ್ತಿತ್ತು. ಆದರೆ ಈಗ ಹಾಗಲ್ಲ ಜನ ಬಯಸಿದ್ದು ಹೊಸ ಮುಖ ಬಿಜೆಪಿಯಲ್ಲಿ ಅದು ಸಾಧ್ಯವಾಗದಿದ್ದಾಗ ಹಲವರು ಹೊಸ ಮುಖದತ್ತ ಚಿತ್ತಹರಿಸುತ್ತಾರೆ. ಹಾಗಾದಾಗ ಅಪ್ಪಚು ರಂಜನ್ ಗೆಲುವು ಸುಲಭವಲ್ಲ.. ಇನ್ನು ಈ ಕ್ಷೇತ್ರದಲ್ಲಿ ಹಲವರು ಪಕ್ಷೇತರರಾಗಿ ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ಇದು ಕೂಡ ಬಿಜೆಪಿಗೆ ತೊಂದರೆ ತರಬಹುದು.

ಒಟ್ಟಿನಲ್ಲಿ ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟ ನಡೆಯುವುದಂತೂ ಖಂಡಿತ. ಬಿಜೆಪಿ ಒಳಗಿನ ಆಂತರಿಕ ಬೇಗುದಿ ಹೊಸಮುಖದ ಅನ್ವೇಷಣೆಯಲ್ಲಿದ್ದ ಮತದಾರರಿಗೆ ನಿರಾಸೆ, ಹಾಗೆ ಹೊಸ ಮುಖ ವಿರೋಧ ಪಾಳ್ಯದಲ್ಲಿ ಉತ್ಸಾಹದಿಂದ ಚುನಾವಣೆಯನ್ನು ನಡೆಸುತ್ತಿರುವ ದೃಶ್ಯಗಳು ಮತದಾರರಲ್ಲಿ ಪರಿಣಾಮಗಳು ಬೀರುವ ಎಲ್ಲಾ ಸಾಧ್ಯತೆಗಳು ಇವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು