News Karnataka Kannada
Saturday, April 27 2024
ಮಡಿಕೇರಿ

ಕೊಡವರ ಬಗ್ಗೆ ವಿವಾದಾತ್ಮಕ ಹೇಳಿಕೆ: ಪ್ರೊ ಜಯಪ್ರಕಾಶ್ ಗೌಡರು ಕೊಡವರಲ್ಲಿ ಕ್ಷಮೆಯಾಚಿಸಲು ದಿನದ ಗಡವು

Controversial remarks on Kodavas: Hc day deadline for Prof. Jayaprakash Gowda to apologise to Kodavas
Photo Credit : By Author

ಕೊಡಗು: ವ್ಯಕ್ತಿಯೊಬ್ಬರನ್ನು ನಿಂದಿಸುವ ಭರಾಟೆಯಲ್ಲಿ “ಕೊಡವರ ರಕ್ತ ಹೈಬ್ರಿಡ್ ರಕ್ತ” ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಇಡೀ ಕೊಡವ ಸಮುದಾಯದ ಭಾವನೆಯನ್ನು ಕೆರಳಿಸಿರುವ ಮಂಡ್ಯ ಜಿಲ್ಲೆಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೋ. ಜಯಪ್ರಕಾಶ್ ಗೌಡರು ಕೂಡಲೇ ಕೊಡವ ಜನಾಂಗದ ಕ್ಷಮೆಯಾಚಿಸದಿದ್ದರೆ ಇವರ ವಿರುದ್ಧ ಕಾನೂನು ಹೋರಾಟ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಎಚ್ಚರಿಸಿವೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಪ್ರೊಫೆಸರ್ ಜಯಪ್ರಕಾಶ್ ಗೌಡರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಒಬ್ಬ ವ್ಯಕ್ತಿಗೂ ಒಂದು ಜನಾಂಗಕ್ಕೂ ವ್ಯತ್ಯಾಸ ಗೊತ್ತಿಲ್ಲದ ಜಯಪ್ರಕಾಶ್ ಗೌಡ ಯಾವ ಸೀಮೆಯ ಪ್ರೊಫೆಸರ್ ಎಂದು ಪ್ರಶ್ನಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಅಡ್ಡಂಡ ಕಾರ್ಯಪ್ಪ ಹಾಗೂ ನಿಮ್ಮ ವಾದ ವಿವಾದಗಳು ಏನೇ ಇರಲಿ ಅದು ನಿಮಗೆ ಬಿಟ್ಟದ್ದು. ಒಬ್ಬ ವ್ಯಕ್ತಿಯ ವಿಷಯವಾಗಿ ಇಡೀ ಜನಾಂಗವನ್ನೆ ಅವಹೇಳನ ಮಾಡಿರುವ ನಿಮ್ಮ ರಕ್ತದ ಬಗ್ಗೆಯೂ ನಾವು ಪ್ರಶ್ನೆ ಕೇಳಬಹುದು.!! ಆದರೆ ಅದು ಕೇಳಿದರೆ ನಿಮಗೂ ನಮಗೂ ವ್ಯತ್ಯಾಸವೇ ಇರುವುದಿಲ್ಲ ಎಂದಿರುವ ಅವರು, ಈ ದೇಶಕ್ಕೆ ಒಬ್ಬರು ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಮತ್ತೊಬ್ಬರು ಜನರಲ್ ತಿಮ್ಮಯ್ಯನವರಂತಹ ನೂರಾರು ಸೇನಾಧಿಕಾರಿಗಳನ್ನು ಲಕ್ಷಾಂತರ ಸೈನಿಕರನ್ನು ಕೊಡುಗೆಯಾಗಿ ನೀಡಿರುವ ಕೊಡವರ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೇ ಎಂದು ಮೊದಲು ತಿಳಿದುಕೊಳ್ಳಬೇಕಿದೆ.

ಕೊಡವರ ಕುಲಮಾತೆಯಾಗಿರುವ ಕಾವೇರಿ ಹರಿದುಬರುತ್ತಿರುವ ಮಂಡ್ಯ ಜಿಲ್ಲೆಗೂ ಕೊಡಗಿಗೂ ಭಾವನಾತ್ಮಕ ಸಂಬಂಧವಿದೆ. ಮಂಡ್ಯದ ಹಾಗೂ ಕೊಡಗಿನ ಜನಾಂಗಗಳ ನಡುವೆ ಸಾಮರಸ್ಯವಿದೆ. ಹಾಗೇ ಕೊಡವರು ಕೂಡ ಸುಮ್ಮನೆ ಯಾರ ತಂಟೆಗೂ ಹೋದವರಲ್ಲ, ಯಾವುದೇ ಜನಾಂಗವನ್ನು ಬೊಟ್ಟು ಮಾಡಿದವರಲ್ಲ. ಆದರೆ ಇದೀಗ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ನಮ್ಮ ಜನಾಂಗದ ಭಾವನೆಯನ್ನು ಕೆರಳಿಸುವ ಕೆಲಸ ಮಾಡಿದ್ದೀರಿ. ಹುತ್ತಕ್ಕೆ ಕೈ ಹಾಕುವ ಕೆಲಸ ಬೇಡ. ನೀವು ಹೇಳಲು ಹೊರಟಿರುವ ಅಡ್ಡಂಡನೇ ಇರಲಿ ಅಥವಾ ಮತ್ಯಾರೆ ಇರಲಿ ಅದು ಜನಾಂಗಕ್ಕೆ ಸಂಬಂಧವಿಲ್ಲ. ಅದು ನಿಮ್ಮ ವೈಯಕ್ತಿಕ ವಿಷಯ.

ವ್ಯಕ್ತಿಯನ್ನು ಅಥವಾ ಅವರು ಪ್ರತಿನಿಧಿಸುವ ಸಂಸ್ಥೆಯನ್ನು ಹೇಳುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ ಇಲ್ಲಿ ನೀವು ಕೊಡವರನ್ನು ಗುರಿಯಾಗಿಸಿಕೊಂಡು ಅಸಂಬದ್ಧ ಹೇಳಿಕೆಯನ್ನು ನೀಡುವ ಮೂಲಕ ನಮ್ಮ ಜನಾಂಗವನ್ನು ಅವಮಾನ ಮಾಡಿದ್ದೀರಿ. ನಮ್ಮ ಭಾವನೆಯನ್ನು ಕೆರಳಿಸಿದ್ದೀರಿ, ನಿಮ್ಮ ಮೇಲೆ ನಾವು ಕಾನೂನು ಹೋರಾಟ ಏಕೆ ಮಾಡಬಾರದು ಎಂಬ ಪ್ರಶ್ನೆ ಕೇಳುವುದಕ್ಕೆ ಮೊದಲು ಕೊಡವ ಜನಾಂಗದ ಕ್ಷಮೆ ಕೇಳಬೇಕಿದೆ, ಇಲ್ಲದಿದ್ದರೆ ಇನ್ನೂ 24 ಗಂಟೆಯೊಳಗೆ ಕಾನೂನಿನ ಪರಿಧಿಯಲ್ಲಿ ಏನು ಮಾಡಬೇಕೆಂದು ನಮಗೆ ತಿಳಿದಿದೆ ಎಂದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳು ಎಚ್ಚರಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು