ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ವಾರ್ಡ್ ನಂ 1 ರಲ್ಲಿ ಚಲಾವಣೆಯಾದ 355 ಮತಗಳಲ್ಲಿ ಬಿ.ಜೆ.ಪಿಯಿಂದ ಸ್ಪರ್ಧಿಸಿದ್ದ ಮೃತ್ಯುಂಜಯ 254 ಮತಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
ಕಾಂಗ್ರೇಸ್ ನ ಭುವನೇಶ್ ಕೇವಲ 75 ಮತಗಳಿಸಿ ಸೋಲುಂಡಿದ್ದಾರೆ.ಉಳಿದಂತೆ ಜೆ.ಡಿ.ಎಸ್. ನ ಗಿರೀಶ್ 19 ಹಾಗೂ ಪಕ್ಷೇತರ ರವಿ 4 ಮತಗಳಿಸಿದ್ದು 3 ನೋಟಾ ಮತ ಚಲಾವಣೆಯಾಗಿದೆ. ಈ ಹಿಂದೆ ಈ ವಾಡ್೯ ನಲ್ಲಿ ಕಾಂಗ್ರೆಸ್ ನ ಉದಯಶಂಕರ್ ಜಯಗಳಿಸಿದ್ದರು.ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಬಿ.ಜೆ.ಪಿ ಗೆಲ್ಲುವ ಮೂಲಕ ತಮ್ಮ ಸದಸ್ಯ ಸಂಖ್ಯೆ ಹೆಚ್ಚಿಸಿಕೊಂಡಿದೆ.