Categories: ಮಡಿಕೇರಿ

ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನ ಮೂವರ ಬಂಧನ

ಕೊಡಗು: ಕಾಫಿ ತೋಟದಲ್ಲಿ ಬೆಳೆದು ನಿಂತಿದ್ದ ಎರಡು ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯ ಬ್ಯಾಲ ಗ್ರಾಮದ ಕೃತಿಗುರು(29),ಮಡಿಕೇರಿ‌ ತಾಲೂಕಿನ ಚೆಂಬು ಗ್ರಾಮದ ಶಶಿಕುಮಾರ್ (28) ಹಾಗೂ ಸೋಮವಾರಪೇಟೆ ತಾಲೂಕಿನ ಕಣಿವೆಬಸವನಹಳ್ಳಿ ಗ್ರಾಮದ ಸಂಜು(35) ಬಂಧಿತ ಆರೋಪಿಗಳು.

ಆರೋಪಿಗಳು ಶನಿವಾರಸಂತೆ ವಲಯದ ಮಾಲಂಬಿ ಶಾಖೆಯ ಕಣಿವೆಬಸವನಹಳ್ಳಿ ಗ್ರಾಮದ ಸಂಜೀವ ಎಂಬವರಿಗೆ ಸೇರಿದ್ದೆನ್ನಲಾದ ಕಾಫಿ ತೋಟದಲ್ಲಿ ಬೆಳೆದು ನಿಂತಿದ್ದ ಎರಡು ಶ್ರೀಗಂಧದ ಮರಗಳನ್ನು ಕಡಿದು 7 ತುಂಡುಗಳನ್ನಾಗಿ ಪರಿವರ್ತಿಸಿದ್ದಲ್ಲದೆ, ಕೆಎ-19 ಎನ್ 4911ರ ಮಾರುತಿ ಕಾರಿನಲ್ಲಿ‌ ಸಾಗಾಟ ಮಾಡಲು ಯತ್ನಿಸುತ್ತಿದ್ದರೆನ್ನಲಾಗಿದೆ.

ವಿಷಯವರಿತ ಉಪ ವಲಯ ಅರಣ್ಯಾಧಿಕಾರಿ ಸೂರ್ಯ ಎಂ.ಜೆ. ಹಾಗೂ ಅರಣ್ಯ ರಕ್ಷಕರಾದ ವೆಂಕಟೇಶ್ ,ಶಂಕರಗೌಡ ಕುಲಕರ್ಣಿ ಮತ್ತು ಆರ್.ಆರ್.ಟಿ. ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಮಾಲು ಸಹಿತ ಕಾರನ್ನು ವಶಪಡಿಸಿಕೊಂಡಿದ್ದಾರೆ.

Sneha Gowda

Recent Posts

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

10 mins ago

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

24 mins ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

40 mins ago

ಭಾರೀ ಗಾಳಿ ಮಳೆಗೆ ಮನೆಯ ಗೇಟ್ ಬಿದ್ದು ಬಾಲಕಿ ಮೃತ್ಯು

ಮಳೆ ಜತೆಗೆ ರಭಸವಾಗಿ ಬೀಸಿದ ಬಿರುಗಾಳಿಗೆ ಮನೆಯ ಗೇಟ್ ಕಿತ್ತು ಬಂದಿದ್ದು, ಇದೇ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ 7…

44 mins ago

ʼಮೇ 18-19 ಹಳ್ಳಿಗಟ್ಟು ಬೋಡ್ ನಮ್ಮೆ: ಮೇ 11 ರಂದು ದೇವ ಕಟ್ಟ್ ಬೀಳುವುದುʼ

ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್…

1 hour ago

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

1 hour ago