Categories: ಮಡಿಕೇರಿ

ನಂಜಮ್ಮ ಕಲ್ಯಾಣ  ಮಂಟಪದಲ್ಲಿ ಜೇಸೀ ಸಪ್ತಾಹದ ಸಮಾರೋಪ ಸಮಾರಂಭ

ಇಂದು ತನ್ನ ನಿಸ್ವಾರ್ಥ ಸೇವೆಯಿಂದಾಗಿಯೇ  ಜೇಸೀ ಸಂಸ್ಥೆ  ವಿಶ್ವಾದ್ಯಂತ ಹೆಸರುವಾಸಿಯಾಗಿದೆ ಎಂದು ಕೊಡುಗೈ ದಾನಿ ಹರಪಳ್ಳಿ ರವೀಂದ್ರ ಅವರು ಹೇಳಿದರು. ಭಾನುವಾರ ಇಲ್ಲಿನ ನಂಜಮ್ಮ ಕಲ್ಯಾಣ  ಮಂಟಪದಲ್ಲಿ ನಡೆದ  ಜೇಸೀ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು  ಜೇಸಿ ಸದಸ್ಯರು 135 ದೇಶಗಳಲ್ಲಿ  ಸೇವೆ ಸಲ್ಲಿಸುತಿದ್ದು ಇವರು ಯಾರಿಗೂ ವ್ಯವಹಾರಿಕ ಮನಸ್ಥಿತಿ ಇಲ್ಲ ಬದಲಿಗೆ  ಪರಸೇವೆಯೇ ಪರಮೋಧರ್ಮ ಎಂದು ಭಾವಿಸಿದ್ದಾರೆ ಎಂದರು.
ಈ ಸಂಸ್ಥೆಯಲ್ಲಿ 18 ರಿಂದ 40 ರ ವಯೋಮಾನದ ಎಲ್ಲರೂ ಭಾಗಿಗಳಾಗಲು ಅವಕಾಶ ಇದ್ದು ದೇಶ ಸೇವೆ, ಸಮಾಜ ಸೇವೆ ಮಾಡುವ ಮುಕ್ತ ಅವಕಾಶದ ಜತೆಗೇ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಇದು ವೇದಿಕೆ ಆಗಿದೆ ಎಂದು ಅವರು ಹೇಳಿದರು. ಇಂದು ದೇಶ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರವನ್ನು ಯಾರೂ ಮರೆಯುವಂತಿಲ್ಲ , ಅದರಲ್ಲೂ ಇಡೀ ದೇಶವೇ ಕೊರೋನದಿಂದ   ಕಂಗೆಟ್ಟಿದ್ದಾಗ  ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅಪರಿಮಿತವಾದುದು ಎಂದು ಅವರು ಹೇಳಿದರು.
ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುದು ಮುಖ್ಯವೇ ಅಲ್ಲ ಬದಲಿಗೆ ನಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಹೋದಾಗ ಮಾತ್ರ  ಜೀವನದ ಸಾರ್ಥಕತೆ ಆಗುತ್ತದೆ ಎಂದು ಹೇಳಿದರು. ಜೇಸೀ ಮಾಜಿ ಅದ್ಯಕ್ಷೆ ಉಷಾರಾಣಿ ಅವರು ಮಾತನಾಡಿ  ಜೇಸೀ ಸಂಸ್ಥೆಯ ಸದಸ್ಯರ ಸೇವೆಯನ್ನು ಶ್ಲಾಘಿಸಿದರು. ಜೇಸೀ ಅದ್ಯಕ್ಷಿಣಿ  ಮಾಯಾ ಗಿರೀಶ ಅದ್ಯಕ್ಷತೆ ವಹಿಸಿದ್ದರು.
Sneha Gowda

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

3 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

3 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

3 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

5 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

5 hours ago