Categories: ಮಡಿಕೇರಿ

ಕೊಡಗಿನಲ್ಲಿ ಕಾಡುತ್ತಿದೆ ನಿಗೂಢ ಕಾಯಿಲೆ ಈ ಹೊಸ ರೋಗದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಇಲ್ಲ

ಮಡಿಕೇರಿ: ಕೋವಿಡ್ ನೆಗೆಟಿವ್, ಡೆಂಗೆ ನೆಗೆಟಿವ್, ಚಿಕೂನ್ ಗುನ್ಯಾ ನೆಗೆಟಿವ್…ಆದರೆ ಈ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು ಇರುವ ಹೊಸದೊಂದು ರೋಗ ಜಿಲ್ಲೆಯ ಹಲವೆಡೆ ಮಕ್ಕಳ ಜೀವ ಹಿಂಡುತ್ತಿದೆ. ಕುಶಾಲನಗರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಗೆಯ ಲಕ್ಷಣಗಳಿರುವ ರೋಗಿಗಳು ಕಂಡು ಬರುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈಚೆಗೆ ಇಲ್ಲಿನ ಸುಮಾರು 30 ಮಂದಿ ಮಕ್ಕಳು ಮೈಸೂರಿನ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಮಾಹಿತಿ ಇದೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಇತರ ಕಡೆಗಳಿಗೂ ಹೋಗಿರುವ ಸಾಧ್ಯತೆಯಿದೆ.

ವಿಪರೀತ ಜ್ವರ, ಮೈಯೆಲ್ಲ ಕಜ್ಜಿ, ತುರಿಕೆ, ಆಗಾಗ್ಗೆ ವಾಂತಿ…ಇಂತಹ ಲಕ್ಷಣಗಳಿರುವ ಕಾಯಿಲೆಯೊಂದು ಕೊಡಗಿನ ಹಲವೆಡೆ ಕಾಣಿಸಿಕೊಂಡಿದೆ. ಅದರಲ್ಲೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಇದು ಇನ್ನು ಕೂಡ ಆರೋಗ್ಯ ಇಲಾಖೆ ಗಮನಕ್ಕೆ ಬಾರದಿರುವುದು ಆಶ್ಚರ್ಯವಾಗಿದೆ.

ಈ ಕಾಯಿಲೆಯೂ ಸೊಳ್ಳೆಗಳಿಂದ ಹರಡುತ್ತಿದೆ ಎನ್ನುವ ಮಾಹಿತಿಯನ್ನು ವೈದ್ಯರು ಕೊಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸೊಳ್ಳೆಗಳು ಹೆಚ್ಚು ಇರುವ ಪ್ರದೇಶಗಳಿಂದಲೇ ಜಾಸ್ತಿ ಪ್ರಕರಣಗಳು ವರದಿಯಾಗುತ್ತಿದೆ. ಒಂದು ವಾರಕ್ಕೂ ಹೆಚ್ಚು ಕಾಲ ಜ್ವರ, ಕಜ್ಜಿ, ತುರಿಕೆಯಿಂದ ಕಾಡುವ ಈ ರೋಗ ಸ್ವಲ್ಪ ಹೆಚ್ಚಾದಾಗ ವಾಂತಿಯೂ ಶುರುವಾಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಪ್ರಾಣಾಪಾಯವೂ ಸಂಭವಿಸಬಹುದು ಎನ್ನುತ್ತಾರೆ ವೈದ್ಯರು.

ರೋಗ ಲಕ್ಷಣಗಳು ಗುಣವಾದ ನಂತರ ದೇಹದ ಸಂದುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿರುವುದು ಮಕ್ಕಳ ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಇದೀಗ ಶಾಲೆಗಳು ಕೂಡ ಆರಂಭವಾಗಿರುವುದರಿಂದ ರೋಗ ಪೀಡಿತ ಮಕ್ಕಳು ಪಾಠಗಳಿಂದಲೂ ವಂಚಿತರಾಗುತ್ತಿದ್ದಾರೆ. ಸೊಳ್ಳೆಗಳ ನಿರ್ಮೂಲನೆಗೆ ಗಮನಹರಿಸಿ ರೋಗ ಮತ್ತಷ್ಟು ಹರಡದಂತೆ ನೋಡಿಕೊಳ್ಳಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Swathi MG

Recent Posts

ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…

12 mins ago

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

16 mins ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

28 mins ago

ಹೆಸ್ಕಾಂ ಲೈನ್ ಮೆನ್ ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಏಕಾಏಕಿ ವಿದ್ಯುತ್ ಪ್ರವೇಶಿಸಿದ ಪರಿಣಾಮ ಹಾಗೂ ಹೆಸ್ಕಾಂ ಲೈನ್ ಮೆನ್ , ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ…

31 mins ago

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ…

43 mins ago

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

1 hour ago