ನಂಜನಗೂಡು: ಹುಚ್ಚುನಾಯಿ ಕಡಿತಕ್ಕೆ ಸುಮಾರು 20 ಕ್ಕೂ ಹೆಚ್ಚುಮಕ್ಕಳು ಗಾಯಗೊಂಡಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ಒಂದು ಹುಚ್ಚು ನಾಯಿ ಬಲಿ ಆಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದು ಇಲ್ಲದೆ ಪೋಷಕರು ಬವಣೆ ಅನುಭವಿಸಿದ್ದಾರೆಂದು ಹೇಳಲಾಗಿದೆ.

ಚಿಕಿತ್ಸೆಗಾಗಿ ಪೋಷಕರು ಖಾಸಗಿ ಆಸ್ಪತ್ರೆ ಮೊರೆ ಹೋಗಿದ್ದಾರೆ. ಒಂದೆಡೆ ಹುಚ್ಚುನಾಯಿ ಕಾಟ ಮತ್ತೊಂದೆಡೆ ಹುಚ್ಚುನಾಯಿ ಕಡಿದರೆ ಚುಚ್ಚುಮದ್ದು ಇಲ್ಲ. ಒಟ್ಟಾರೆ ಹುಲ್ಲಹಳ್ಳಿ ನಿವಾಸಿಗಳು ಹುಚ್ಚುನಾಯಿ ಹಾವಳಿಗೆ ಬೇಸತ್ತಿದ್ದಾರೆ. ಇನ್ನೂ ಎರಡು ನಾಯಿಗಳು ಭೀತಿ ಹುಟ್ಟಿಸುತ್ತಿರುವುದಾಗಿ ತಿಳಿದು ಬಂದಿದೆ. ತಾಲ್ಲೂಕು ಆಡಳಿತ ಇತ್ತ ಗಮನಹರಿಸಬೇಕಿದೆ.

