ಮೈಸೂರು : ಮೈಸೂರಲ್ಲಿ ಏಕಕಾಲಕ್ಕೆ ಹತ್ತು ಕಡೆ ಲೋಕಾಯುಕ್ತ ದಾಳಿ ನಡೆಸಿದ ಘಟನೆ ನಡೆದಿದೆ. ಇ- ಸ್ವತ್ತು ಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದರು. ಜನರಿಂದ ಹಣ ಸುಲಿಗೆಗೆ ಇಳಿದಿದ್ದ ಅಧಿಕಾರಿಗಳಿಗೆ ಲೋಕಾಯುಕ್ತ ಚಾಟಿ ಬೀಸಿದೆ.
ಹೂಟಗಳ್ಳಿ ಪಂಚಾಯ್ತಿ, ಬೋಗಾದಿ ಪಾಂಚಾಯ್ತಿ, ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ಶ್ರೀರಾಂಪುರ ಪಟ್ಟಣ ಪಂಚಾಯ್ತಿ, ಕಡಕೊಳ ಪಟ್ಟಣ ಪಂಚಾಯ್ತಿ ಹಾಗು ವಲಯ ಕಚೇರಿ 2,3 , 7, 8, 9 ರಲ್ಲಿ ದಾಳಿ ನಡೆಸಿದೆ.

ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಇ- ಸ್ವತ್ತು, ಇ- ಖಾತೆ ಮಾಡಿಕೊಡಲು ಲಂಚ ಕೇಳುತ್ತಿದ್ದ ಆರೋಪ ಕೇಳಿಬಂದಿದೆ. ಎಲ್ಲಾ ಕಚೇರಿಗಳ ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ದಾಖಲೆ, ಕಡತಗಳ ಪರಿಶೀಲನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತೊಡಗಿಕೊಂಡಿದ್ದಾರೆ.

