ಮೈಸೂರು: ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿರುವ ಘಟನೆ ಮೈಸೂರಲ್ಲಿ ನಡೆದಿದೆ.

ವೆಂಕಟರಾಮ್, ಉಪ ವಿಭಾಗಾಧಿಕಾರಿ, ವಲಯ ಕಚೇರಿ 5, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ನಿವಾಸ. ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿರುವ ಮನೆ ಮೇಲೆ ದಾಳಿ, ಮತ್ತೊಂದೆಡೆ ಮಂಜುನಾಥಸ್ವಾಮಿ ನಿವಾಸದ ಮೇಲೆ ರೇಡ್, ಸಾತಗಳ್ಳಿ, ಜೆಪಿ ನಗರದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಕೌಶಲ್ಯಾಭಿವೃದ್ಧಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರ ಮನೆ ಮೇಲೆ ರೇಡ್ ಮಾಡಲಾಗಿದೆ. ಇವರು ಕಳೆದ ತಿಂಗಳು ನಿವೃತ್ತಿ ಹೊಂದಿರುವ ಅಧಿಕಾರಿಯಾಗಿದ್ದರು.