Categories: ಮೈಸೂರು

ಮೂರು ತಲೆಮಾರುಗಳಿಂದ ಜೋಪಡಿಯಲ್ಲಿ ವಾಸ : ಹೀನಾಯ ಬದುಕು ಸಾಗಿಸುತ್ತಿರುವ ಕುಟುಂಬ

ಮೈಸೂರು : ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ತಲೆ ಮೇಲೆ ಸೂರಿಲ್ಲ, ಇಡೀ ಗ್ರಾಮದ ಚರಂಡಿ ನೀರು ಮನೆ ಮುಂದೆ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೌಲಭ್ಯವಿಲ್ಲ ಇದು ಕಳೆದ ಏಳು ದಶಕಗಳಿಂದ ಹಾಗೂ ಮೂರು ತಲೆಮಾರುಗಳಿಂದ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಪುಟ್ಟಮ್ಮ ಮತ್ತು ಎಲ್ಲಮ್ಮ ಎಂಬ ಎರಡು ಕುಟುಂಬಗಳ ದುಃಸ್ಥಿತಿ.

ನಂಜನಗೂಡು ತಾಲ್ಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ ವಾಸವಿರುವ ಹಂದಿಜೋಗಿ ಕುಟುಂಬದ ಪರಿಸ್ಥಿತಿ ನೋಡಿದ್ರೆ ಜನಪ್ರತಿನಿಧಿಗಳಾಗಲಿ,ಅಧಿಕಾರಿಗಳಾಗಲಿ ತಲೆ ತಗ್ಗಿಸುವಂತಾಗುತ್ತದೆ. ಸುಮಾರು 75 ವರ್ಷಗಳಿಂದ ಜೋಪಡಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬದುಕು ಸಾಗಿಸುತ್ತಿರುವ ಈ ಕುಟುಂಬಗಳು ಚುನಾವಣೆ ಬಂದ್ರೆ ಮತಹಾಕಿ ಹಕ್ಕು ಚಲಾಯಿಸುತ್ತಾರೆ. ಆದ್ರೆ ಮೂಲಭೂತ ಸೌಕರ್ಯಗಳನ್ನ ಪಡೆಯುವ ತಮ್ಮ ಹಕ್ಕಿನಲ್ಲಿ ನಿರಂತರವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಚುನಾವಣೆ ಬಂದ್ರೆ ಮತಕ್ಕಾಗಿ ಜೋಪಡಿ ಬಾಗಿಲು ಬಡಿಯುವ ಜನಪ್ರತಿನಿಧಿಗಳಿಗೆ ಇವರ ಬವಣೆ ಮಾತ್ರ ಕಾಣಿಸುತ್ತಿಲ್ಲ.

ನಮಗೆ ಮನೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಎಂದು ಸಾಕಷ್ಟು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಕುಟುಂಬಸ್ಥರು ನಿರ್ಧರಿಸಿದ್ದಾರೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿಲ್ಲ. ಗ್ರಾಮದ ಚರಂಡಿ ನೀರೆಲ್ಲಾ ಇವರ ಜೋಪಡಿಗಳ ಮುಂದೆ ಸಂಗ್ರಹವಾಗಿ ದುರ್ವಾಸನೆ ಕಾಡುತ್ತಿದ್ದರೂ ಸಹಸಿಕೊಳ್ಳುತ್ತಿರುವ ಈ ಕುಟುಂಬದ ಸಹನೆಯನ್ನ ಅರ್ಥಮಾಡಿಕೊಳ್ಳುವ ಮನುಸ್ಸುಗಳೇ ಇಲ್ಲ. ಈ ದೃಶ್ಯಗಳನ್ನ ನೋಡಿಯಾದ್ರೂ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಕಿಂಚತ್ತಾದರೂ ಹೃದಯವಂತೆಕೆ ತೋರಿ ಇವರ ಬವಣೆ ನೀಗಿಸಬೇಕಿದೆ

Nisarga K

Recent Posts

ಆರು ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಬದರಿನಾಥ

ಉತ್ತರಾಕಾಂಡ ಚಮೋಲಿಯಲ್ಲಿರುವ ಬದರಿನಾಥ ಬಾಗಿಲನ್ನು ಇಂದು(ಬಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು. ಈ ವೇಳೆ ವೇದ ಘೋಷಗಳು ಮತ್ತು ನೆರೆದಿದ್ದ…

42 seconds ago

ಬಸವ ಭವನದ ಜಮೀನಿಗೆ ಪೂಜೆ ಮತ್ತು ಷಟಸ್ಥಲ ಧ್ವಜಾರೋಹಣ

ನಗರದ ನಾವದಗೇರೆ ಸಮೀಪದ ಸರ್ವೇ ನಂ. 60ರಲ್ಲಿ ಜಿಲ್ಲಾಡಳಿತದಿಂದ ಮೀಸಲಿಟ್ಟಿರುವ ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ…

27 mins ago

ಸಂಸ್ಕಾರದ ತೊಟ್ಟಿಲು ಸರಸ್ವತಿ ಶಾಲೆ : ಹಿರಿಯ ಶಿಕ್ಷಕಿ

ನಗರದ ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಬಹಳ…

39 mins ago

ತಮಿಳು ನಟ ಸಿಂಭು ಅವರನ್ನು ಚಿತ್ರರಂಗದಿಂದ ನಿಷೇಧಿಸುವಂತೆ ನಿರ್ದೇಶಕ ಒತ್ತಾಯ

ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಂಭು ಅವರ ವಿರುದ್ಧ ಇದೀಗ ನಿರ್ದೇಶಕ ದೂರು ನೀಡಿದ್ದು ತಮಿಳು ಚಿತ್ರರಂಗದಿಂದ ಹೊರಗಟ್ಟಬೇಕು ಎಂದು…

58 mins ago

ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ : ಹಾಗಾದ್ರೆ ಇಲ್ಲಿದೆ ಟಿಪ್ಸ್‌

ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ…

1 hour ago

ಇಂದು 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…

2 hours ago