ಮೈಸೂರು : ಸರ್ಕಾರಿ ವಾಹನದಲ್ಲಿ ಮಧ್ಯ ಬಾಟಲಿಗಳು, ಸರ್ಕಾರಿ ಕಡತಗಳು ಪತ್ತೆಯಾಗಿದೆ. ಸರ್ಕಾರಿ ವಾಹನದಲ್ಲಿ ಖಾಸಗಿ ವ್ಯಕ್ತಿ ಚಾಲಕನಾಗಿದ್ದನು. ಸಾರ್ವಜನಿಕರ ಕೈಗೆ ವಾಹನ ಸಿಕ್ಕಿಬಿದ್ದಿರುವ ಘಟನೆ ಹುಣಸೂರಿನ ಬಸ್ ಸ್ಟ್ಯಾಂಡ್ ಬಳಿ ನಡೆದಿದೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ವಾಹನದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಸ್ಥಳೀಯರ ಕೈಗೆ ರೆಡ್ ಹ್ಯಾಂಡಾಗಿ ವಾಹನ ಸಿಕ್ಕಿಬಿದ್ದಿದೆ. ಟೌನ್ ಪೊಲೀಸರಿಗೆ ಕೆಆರ್ಎಸ್ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ನೀಡಲಾಗಿದೆ. ಸ್ಥಳಕ್ಕಾಆಗಮಿಸಿ ಪೊಲೀಸರು ವಾಹನ ಪರಿಶೀಲಿಸಿದರು.

ವಾಹನದಲ್ಲಿ ಮೂರು ಮದ್ಯದ ಬಾಟಲ್, ಸರ್ಕಾರಕ್ಕೆ ಸೇರಿದ ಕಡತಗಳು ಪತ್ತೆಯಾಗಿದೆ. ಯಾವುದೇ ಅಧಿಕೃತ ಅಧಿಕಾರಿ ಇಲ್ಲದೆ ಸರ್ಕಾರಿ ವಾಹನದಲ್ಲಿ ಕಡತಗಳು, ಮದ್ಯದ ಬಾಟಲಿಗಳು ಸಿಕ್ಕಿಬಿದ್ದಿದೆ. ವಾಹನವನ್ನ ಸೀಜ್ ಮಾಡಿ ಹುಣಸೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.