ಮೈಸೂರು: ಮಾನವೀಯ ಸೇವೆಯ ಉದ್ದೇಶವನ್ನು ಮುಂದುವರಿಸಿಕೊಂಡು ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ವತಿಯಿಂದ ರಾತ್ರಿ 11 ರಿಂದ 12 ಗಂಟೆಯವರೆಗೆ ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯವಿರುವ ನಿರಾಶ್ರಿತರು ಹಾಗೂ ಬಡವರಿಗೆ ಹೊದಿಕೆಗಳನ್ನು ವಿತರಿಸಲಾಯಿತು.
ಈ ಸೇವಾ ಕಾರ್ಯಕ್ರಮವು ಕೆ.ಆರ್. ಆಸ್ಪತ್ರೆ ಆವರಣ, ಮೈಸೂರು ರೈಲ್ವೆ ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆಯಿತು. ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ತಂಗಿದ್ದ ಕುಟುಂಬಸ್ಥರು, ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ನಿರ್ಗತಿಕರು ಹಾಗೂ ಚಳಿಯಿಂದ ತೊಂದರೆ ಅನುಭವಿಸುತ್ತಿದ್ದವರಿಗೆ ಹೊದಿಕೆಗಳನ್ನು ವಿತರಿಸುವ ಮೂಲಕ ಕ್ಲಬ್ ಸದಸ್ಯರು ಮಾನವೀಯ ಕಾಳಜಿಯನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಕೆ. ಪ್ರಸನ್ನ ರವರು ಸಮಾಜದ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವುದು ಲಯನ್ಸ್ ಸಂಸ್ಥೆಯ ಪ್ರಮುಖ ಧ್ಯೇಯವಾಗಿದ್ದು, ಇಂತಹ ಸೇವಾ ಕಾರ್ಯಕ್ರಮಗಳನ್ನು ಮುಂದೆಯೂ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ಸದಸ್ಯರಾದ ಡಾ. ಜಿ ಕಿಶೋರ್, ತನುಜಾ ಮಹೇಶ್, ಕೆ ಟಿ ವಿಷ್ಣು,ಪಿ.ಮಲ್ಲಿಕಾರ್ಜುನಪ್ಪ ಭಾಗವಹಿಸಿ ಸೇವಾ ಕಾರ್ಯದಲ್ಲಿ ಕೈಜೋಡಿಸಿದರು. ಸಾರ್ವಜನಿಕರು ಸಂಸ್ಥೆಯ ಮಾನವೀಯ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು ಇಂದು ಲಯನ್ಸ್ ಜುಲೈ 317ಜಿ ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಲುನ್ ಸಿ.ಆರ್ ದಿನೇಶ್ ರವರು ತಿಳಿಸಿದ್ದಾರೆ.

