ಮೈಸೂರು : ಬೋನಿಗೆ  ಚಿರತೆ ಬಿದ್ದಿದ್ದು, ನಿಲುವಾಗಿಲು ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಜಾನುವಾರಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಸೆರೆಯಾಗಿದೆ.

ಮೈಸೂರು ಜಿಲ್ಲೆ ಸರಗೂರು ತಾಲೂಕಿನ ನಿಲುವಾಗಿಲು ಗ್ರಾಮದ ಬಳಿ ಚಿರತೆ ಸೆರೆಯಾಗಿದ್ದು, ಚಿರತೆ ಕಾಟದಿಂದ ಗ್ರಾಮದ ಜನರು ಬೆಚ್ಚಿಬಿದ್ದಿದ್ದರು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು  ಒತ್ತಾಯಿದ್ದರು.

ಚಿರತೆ ಸೆರೆಗಾಗಿ ನಿಲುವಾಗಿಲು ಗ್ರಾಮದ ಬಳಿ  ಅರಣ್ಯ ಇಲಾಖೆ ಬೋನಿರಿಸಿದ್ದರು. ಬೋನಿಗೆ ಬಿದ್ದ ಚಿರತೆ ಅರಣ್ಯ ಪ್ರದೇಶಕ್ಕೆ ರವಾನೆ‌ ಮಾಡಲಾಯಿತು. ಚಿರತೆ ಸೆರೆಯಿಂದ  ಗ್ರಾಮದ ಜನ ನಿಟ್ಟುಸಿರು ಬಿಟ್ಟರು.