ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಚವಾಗಿದ್ದು, ಬೆಟ್ಟದ ದೇವಿ ಕೆರೆ ರಸ್ತೆ ಬಳಿ ಚಿರತೆ ಕಾಣಿಸಿಕೊಂಡಿದೆ. ರಾತ್ರಿ ಸುಮಾರು 11 ಗಂಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ರಸ್ತೆ ಸೇತುವೆ ಮೇಲೆ  ಚಿರತೆ ಕುಳಿತಿದೆ. ವಾಹನ ಸವಾರರ ಮೊಬೈಲ್‌ನಲ್ಲಿ ಚಿರತೆ ದೃಶ್ಯ ಸೆರೆಯಾಗಿದೆ.  ಚಾಮುಂಡಿ ಬೆಟ್ಟ ಚಿರತೆಗಳ ಆವಾಸಸ್ಥಾನವಾಗಿದೆ.

ಆಗಾಗ ರಸ್ತೆಗಳಲ್ಲೋ, ಬೆಟ್ಟದ ತಪ್ಪಲಲ್ಲೋ ಚಿರತೆಗಳು ಪ್ರತ್ಯಕ್ಷವಾಗುತ್ತದೆ. ಸ್ಥಳೀಯ ನಿವಾಸಿಗಳು, ಪ್ರವಾಸಿಗರಲ್ಲಿ ಆತಂಕ ಉಂಟಾಗಿದೆ.  ಅರಣ್ಯ ಇಲಾಖೆ ನಿಗಾ ವಹಿಸುವಂತೆ ಒತ್ತಾಯಿಸಲಾಗಿದೆ.