ಮೈಸೂರು: ಟಿ ನರಸೀಪುರ ತಾಲ್ಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸಿದೆ. ಬೆಳಗಿನ ಜಾವ ನಾಲ್ಕು ಮೂವತ್ತರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇಟ್ಟಿಗೆ ಗೂಡಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದೆ.

ಉಕ್ಕಲಗೆರೆ ಮತ್ತು ಎಂ ಎಲ್ ಹುಂಡಿ ಗ್ರಾಮಗಳ ಸಮೀಪದಲ್ಲಿರುವ ರಾಜೇಶ್ ಎಂಬುವರ ಇಟ್ಟಿಗೆ ಗೂಡಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಮನೆ ಮುಂಭಾಗ ಕಟ್ಟಿ ಹಾಕಿದ್ದ ನಾಯಿಮರಿಯನ್ನು ಕಚ್ಚಿಕೊಂಡು ಹೋಗಿದೆ. ಕಳೆದ ಎರಡು ತಿಂಗಳ ಹಿಂದೆ ನಾಯಿಯೊಂದನ್ನು ಹಿಡಿದುಕೊಂಡು ಹೋಗಿತ್ತು.

ಮತ್ತೆ ಇದೆ ಸ್ಥಳಕ್ಕೆ ಚಿರತೆ ಬಂದಿದ್ದು, ಗ್ರಾಮಸ್ಥರು ಮತ್ತು ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆ ಸೆರೆಗಾಗಿ ಬೋನು ಅಳವಡಿಸಿದ್ದಾರೆ.