ಮೈಸೂರು : ಜಮೀನು ವಿವಾದದಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಎರಡು ಗಂಪುಗಳ ಹೊಡೆದಾಟ ನೋಡಿ ಇತರೆ ರೋಗಿಗಳು ಬೆದರಿದರು. ಹೆಚ್.ಡಿ ಕೋಟೆ ತಾಲೂಕಿನ ಶರೀಫ್ ಕಾಲೋನಿ ಸರ್ವೇ ನಂಬರ್ 1/687 ಜಮೀನು ವಿಚಾರಕ್ಕೆ ಗಲಾಟೆ ನಡೆದಿದೆ.

ನಾಗರಾಜು ಹಾಗೂ ನಾಯಜ್ ಗುಂಪಿನ ನಡುವೆ ವಿವಾದ ಸೃಷ್ಟಿಯಾಗಿದ್ದು, ಇದೇ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಗಾಯವಾಗಿ ನಾಗರಾಜ್ ಹಾಗೂ ರವಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಗೂ ಗುಂಪು ಕಟ್ಟಿಕೊಂಡು ಬಂದು ನಯಾಜ್ ರಿಂದ ಹಲ್ಲೆ ಮಾಡಲಾಗಿದೆ. ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 13ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.