ಮೈಸೂರು : ಜೈಲಿನ ಕೈದಿಗೆ ಗಾಂಜಾ ಪೇಸ್ಟ್ ಸರಬರಾಜನ್ನು ಕೆಎಸ್‌ಐಎಸ್‌ಎಫ್ ಅಧಿಕಾರಿಗಳು, ಸಿಬ್ಬಂದಿ ತಡೆದಿರುವ ಘಟನೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ಕೈಗಾರಿಕ ಭದ್ರತಾ ಪಡೆಯಿಂದ ಪತ್ತೆಯಾಗಿದ್ದು, ಆಕಾಶ್ ಎಂಬ ಕೈದಿಗೆ ಗಾಂಜಾ ಪೇಸ್ಟ್ ಸರಬರಾಜು ಮಾಡುತ್ತಿದ್ದರು. ರೂಪಾ ಎಂಬಾಕೆಯಿಂದ ಯತ್ನ ನಡೆದಿದೆ. ವಿಸಿಟರ್ ಆಗಿ ಆಕಾಶ್ ನನ್ನು ನೋಡಲು ರೂಪಾ ಬಂದಿದ್ದರು.
ತನ್ನ ಜೀನ್ಸ್ ಪ್ಯಾಂಟ್ ಬೆಲ್ಟ್‌ನಲ್ಲಿ ಅಡಗಿಸಿಕೊಂಡು ರೂಪಾ ಬಂದಿದ್ದರು. ತಪಾಸಣೆ ವೇಳೆ ಕರ್ನಾಟಕ ರಾಜ್ಯ ಕೈಗಾರಿಕ ಭದ್ರತ ಪಡೆ ಸಿಬ್ಬಂದಿಯಿಂದ ಪತ್ತೆ ಹಚ್ಚಲಾಗಿದೆ. 6 ಪ್ಯಾಕೇಟ್ ಗಾಂಜಾ ಪೇಸ್ಟ್ ವಶಕ್ಕೆ ಪಡೆಯಲಾಗಿದೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

