ಮೈಸೂರು: ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಶ್ರೀ ಅಮ್ಮಕನಹಳ್ಳಿ ಮಾರಮ್ಮನವರ ಜಾತ್ರಾ ಮತ್ತು ಕೊಂಡೋತ್ಸವ ಅದ್ದೂರಿಯಾಗಿ ನಡೆಯಿತು. ಡೋಲು ಕುಣಿತ, ನಂದಿ ಕುಣಿತ, ವೀರಗಾಸೆ, ಬಸವ ಕೋಲು, ಸುತ್ತಿಗೆ, ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.

ಹಾಲರವೆ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯದಲ್ಲಿ ಅಮ್ಮಕನಹಳ್ಳಿ ಮಾರಮ್ಮನಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ ಬಳಿಕ ಹರಕೆ ಹೊತ್ತ ಭಕ್ತರು ಕೊಂಡವನ್ನು ಹಾಯ್ದು ಭಕ್ತಿ ಭಾವವನ್ನು ಮೆರೆದರು.

 

ಜಾತ್ರಾ ಮಹೋತ್ಸವದಲ್ಲಿ ಅನ್ನದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ರವರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.