ನಂಜನಗೂಡು: ಮನೇಲಿ ಊಟ ಮಾಡ್ತಿದ್ದ ವ್ಯಕ್ತಿಯನ್ನ ಕರೆದೊಯ್ದ ಪೇದೆಯೊಬ್ಬ ಠಾಣೆ ಬಳಿ ಕರೆತಂದು ಹಿಗ್ಗಾಮುಗ್ಗ ಥಳಿಸಿರುವ ಪ್ರಕರಣ ನಂಜನಗೂಡುನಲ್ಲಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ವ್ಯಕ್ತಿ ಕಣ್ಣೀರು ಸುರಿಸುತ್ತಾ ತನಗಾದ ನೋವನ್ನ ಹೇಳಿಕೊಂಡಿದ್ದಾನೆ. ನಂಜನಗೂಡು ಚಾಮಲಾಪುರ ಬೀದಿಯ ಮಹಮದ್ ಅಲ್ಲಾವುದೀನ್ ಪೇದೆಯಿಂದ ಹಲ್ಲೆಗೊಳಗಾದ ವ್ಯಕ್ತಿ. ಟೌನ್ ಪೊಲೀಸ್ ಠಾಣೆಯ ಪೇದೆ ನಜೀಮುಲ್ಲಾ ಎಂಬುವರು ಹಲ್ಲೆ ನಡೆಸಿದ್ದಾರೆಂದು ಮಹಮದ್ ಅಲ್ಲಾವುದೀನ್ ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದೆ ರಾತ್ರಿ ವೇಳೆ ಅಲ್ಲಾವುದ್ದೀನ್ ಮನೆಗೆ ಬಂದ ನಜೀಮುಲ್ಲಾ ಗಲಾಟೆ ಮಾಡ್ತೀಯ ಎಂದು ಆರೋಪಿಸಿ ಇಬ್ಬರು ಹೋಂಗಾರ್ಡ್ ಗಳ ಜೊತೆ ಠಾಣೆ ಬಳಿಗೆ ಕರೆದೊಯ್ದಿದ್ದಾರೆ. ಕಾರಣ ನೀಡದೆ ಅಲ್ಲಾವುದ್ದೀನ್ ಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ.
ಬೂಟ್ ಕಾಲಿನಿಂದ ಒದ್ದಿದ್ದಾರೆ. ಹಲ್ಲೆಯಿಂದ ಗಾಯಗೊಳಗಾದ ಅಲ್ಲಾವುದ್ದೀನ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ತನಗೆ ವಿನಾಕಾರಣ ಹಲ್ಲೆ ನಡೆಸಿದ ಪೇದೆ ನಜೀಮುಲ್ಲಾ ಮೇಲೆ ಕ್ರಮ ಕೈಗೊಳ್ಳುವಂತೆ ಕಣ್ಣೀರಿಡುತ್ತಾ ಮನವಿ ಮಾಡಿದ್ದಾನೆ. ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಾರದೆ ಕಾನೂನು ಕೈಗೆತ್ತಿಕೊಳ್ಳುವ ಸ್ವಾತಂತ್ರ ಯಾರು ನೀಡಿದ್ರು…? ಅಲ್ಲಾವುದ್ದೀನ್ ಈಗಾಗಲೇ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ MOB ಎಂದು ಹೇಳಲಾಗಿದೆ.

ಈತನ ಮೇಲೆ ಯಾವುದಾದ್ರೂ ಆರೋಪ ಬಂದಿದೆಯೇ…? ಬಂದಿದ್ದರೆ ದೂರು ದಾಖಲಾಗಿದೆಯೇ…? ದೂರು ದಾಖಲಿಸಿಕೊಳ್ಳದೆ ಕಾನೂನು ಕೈಗೆತ್ತಿಕೊಳ್ಳುವುದು ಅಪರಾಧ ಎಂಬ ವಿಚಾರ ಪೇದೆ ನಜೀಮುಲ್ಲಾಗೆ ಗೊತ್ತಿಲ್ಲವೇ…? ಯಾವುದೇ ದೂರು ದಾಖಲಿಸದೆ ಅನಗತ್ಯವಾಗಿ ಹಲ್ಲೆ ನಡೆಸಿದ ಪೇದೆ ಮೇಲೆ ಕ್ರಮ ಜರುಗುವುದೇ…?.

