ಮೈಸೂರು: KDM916 ಎಂದು ಮುದ್ರೆ ಒತ್ತಿ ನಕಲಿ ಉಂಗುರುಗಳನ್ನ ಜ್ಯುವೆಲ್ಲರಿ ಅಗಂಡಿಯಲ್ಲಿ ಗಿರವಿ ಇಟ್ಟು ವಂಚನೆ ಮಾಡಿದ ಭೂಪನನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ನಿವಾಸಿ ಮಂಜುನಾಥ್@ಮಹೇಶ್ (45) ಬಂಧಿತ ಆರೋಪಿ.ಹುಣಸೂರು ತಾಲೂಕು ಗಾವಡಗೆರೆ ಗ್ರಾಮದ ಕಾವೇರಿ ಜ್ಯೂಯಲರ್ಸ್ ಗೆ ವಂಚಿಸಿದ ಭೂಪ. 2023 ರಿಂದ ಇಲ್ಲಿಯವರೆಗೂ ಮಂಜುನಾಥ್ ಕಾರಿನಲ್ಲಿ ಬಂದು ನಕಲಿ ಉಂಗುರಗಳ ಮೇಲೆ ಅಸಲಿ ಮುದ್ರೆ ಒತ್ತಿ ನಂಬಿಸಿ ಗಿರವಿ ಇಟ್ಟಿದ್ದಾನೆ. ನಂತರ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದು ಗ್ರಾಮಾಂತರ ಪೊಲೀಸರಿಗೆ ಮಾಲೀಕ ರಾಜೇಂದ್ರ ಸಿಂಗ್ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.ಸುಮಾರು ಎರಡು ವರ್ಷಗಳ ಅವಧಿಯಲ್ಲಿ 11 ನಕಲಿ ಉಂಗುರಗಳನ್ನ ಗಿರವಿ ಇಟ್ಟು 5 ಲಕ್ಷ ವಂಚಿಸಿರುವುದು ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲೆಯ ಪೊಲೀಸ್ ಅಧಿಕ್ಷಕರಾದ ವಿಷ್ಣುವರ್ಧನ್ ಹಾಗೂ ಹುಣಸೂರು ಉಪ ವಿಭಾಗದ ಪೊಲೀಸ್ ಉಪಾಧ್ಯಕ್ಷಕರಾದ ಗೋಪಾಲಕೃಷ್ಣ ರವರ ಮೇಲು ಉಸ್ತುವಾರಿಯಲ್ಲಿ ಹುಣಸೂರು ಗ್ರಾಮಂತರ ಪೊಲೀಸ್ ರಾಣಿಯ ಪೊಲೀಸ್ ನಿರೀಕ್ಷಕರಾದ ಮುನಿಯಪ್ಪ ಎನ್ ಹಾಗೂ ಉಪನಿರೀಕ್ಷಕರಾದ ಶ್ರೀನಿವಾಸಲು ಹಾಗೂ ಸಿಬ್ಬಂದಿಗಳಾದ ಮಹದೇವ, ರಮೇಶ, ಎಚ್ ಸಿ ಮಂಜುನಾಥ ವಿ.ಜೆ ಇಮ್ರಾನ್ ಶರೀಫ್ ಜೀಪ್ ಚಾಲಕ ಸುಂದರ್ ರಾಜು ರವರು ಕಾರ್ಯಚರಣೆ ಯಶಸ್ವಿಗೊಳಿಸಿರುತ್ತಾರೆ.