ನಂಜನಗೂಡು: ಜೂಜು ಅಡ್ಡೆಯ ಮೇಲೆ ಕವಲಂದೆ ಪೊಲೀಸರು ದಾಳಿ ನಡೆಸಿ 9 ಜನರನ್ನು ಬಂಧಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

ನಂಜನಗೂಡು ತಾಲ್ಲೂಕಿನ ಪಿ.ಮರಹಳ್ಳಿ ಗ್ರಾಮದ ದಾಸನೂರು ರಸ್ತೆಯಲ್ಲಿರುವ ನಾಗರಕಟ್ಟೆ ಹತ್ತಿರ ಕೆರೆ ಏರಿಯ ಸಾರ್ವಜನಿಕ ಸ್ಥಳದಲ್ಲಿ ಸುಮಾರು 9 ಮಂದಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಅರಳಿ ಮರದ ಕೆಳಗಡೆ ಅಂದರ್ ಬಾಹರ್ ಆಡುತ್ತಿದ್ದ 9 ಮಂದಿಯನ್ನು ಪೊಲೀಸರು ಸುತ್ತುವರಿದು ಜೂಜಾಟದಲ್ಲಿ ಪಣಕಿಟ್ಟಿದ್ದ 5.300 ರೂಗಳು, ಮಹಾಲಿಂಗ, ಆನಂದ್, ರಾಜು, ಮಹೇಶ್, ಬಸವಣ್ಣ, ಮಹೇಶ್, ಸುಬ್ಬಣ್ಣ, ಚಂದ್ರಶೇಖರ್, ದೊಡ್ಡ ಮಾದಪ್ಪ ಎಂಬುವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು 9 ಜನರನ್ನು ಬಂಧಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

ಕಾರ್ಯಚರಣೆಯಲ್ಲಿ ಪಿಎಸ್ಐ ಬಸವರಾಜು, ಎಎಸ್ಐ ಬಸವರಾಜು ಸಿಬ್ಬಂದಿಗಳಾದ ಎಸ್.ಬಿ ರಮೇಶ್, ಚಂದ್ರು, ಚೆಲುವರಾಜು, ರವಿಕುಮಾರ್, ರಾಜಶೇಖರ್, ನಾಗೇಂದ್ರ ಹಾಜರಿದ್ದರು.