ಮೈಸೂರು : 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಮೈಸೂರಿನ ಮಾಜಿ ಸೈನಿಕರಿಂದ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಜೆ ಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 26ನೇ ವರ್ಷದ ಕಾರ್ಗಿಲ್ ವಿಜಯ ದಿನ ಆಚರಣೆ ಮಾಡಲಾಯಿತು. ಹುತಾತ್ಮ ಕಾರ್ಗಿಲ್ ಮಾಣಿಕ್ಯರುಗಳಾದ ಕ್ಯಾಪ್ಟನ್ ವಿಕ್ರಂ ಬಾತ್ರ, ಲೆಫ್ಟ್ ನೆಟ್ ಮನೋಜ್ ಪಾಂಡೆ ಮತ್ತು ಕ್ಯಾಪ್ಟನ್ ಸೌರಭ ಕಾಲಿಯಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕಾರ್ಗಿಲ್ ಯುದ್ಧದ ಬಗ್ಗೆ, ಕಾರ್ಗಿಲ್ ನಲ್ಲಿ ಬಾವುಟ ಸುಮ್ಮನೆ ಗಾಳಿಯಲ್ಲಿ ಹಾರುತಿಲ್ಲ. ಬದಲಿಗೆ 527 ಸೈನಿಕರ ತ್ಯಾಗ ಬಲಿದಾನದ ಸಂಕೇತವಾಗಿ ಹಾರುತ್ತಿದೆ. ಇಂಥವರಿಗೆ ನಾವು ಈ ದಿನ ಗೌರವ ಸಲ್ಲಿಸದಿದ್ದರೆ ನಾವು ಬದುಕಿದ್ದು ಸತ್ತಂತೆ.
ಪ್ರತಿ ವರ್ಷ ಪ್ರತಿಯೊಬ್ಬ ಭಾರತೀಯ ನಾಗರೀಕನೂ ಗೌರವ ಸಲ್ಲಿಸಿದರೆ ಮಾತ್ರ ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿ ನೀಡಿದರು.

