ಮೈಸೂರು : ದಸರಾದಲ್ಲಿ ಕಂಬಳ ಆಯೋಜನೆ ಬೇಡ. ದಸರಾದಲ್ಲಿ ಕಂಬಳ ವಿರೋಧಿಸಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಪ್ರತಿಭಟಿಸಿದರು.

ಕಂಬಳ ಬೇಡವೇ ಬೇಡ ಎಂದು ಘೋಷಣೆ ಕೂಗಲಾಯಿತು. ದಸರಾ ಪರಂಪರೆ ಉಳಿಸಿ. ಜನರ ಭಾವನೆಗಳಿಗೆ ಬೆಲೆ ಕೊಡಿ. ಕಂಬಳದಿಂದ ದಸರಾ ಉತ್ಸವವಕ್ಕೆ ಧಕ್ಕೆ ಬರುತ್ತದೆ.
ಯಾವುದೇ ಕಾರಣಕ್ಕೂ ಕಂಬಳ ಆಯೋಜಿಸಬಾರದು. ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಆಯಾ ನೆಲದ ಆಚರಣೆಗಳೂ ಅಲ್ಲೆಲ್ಲೇ ಇದ್ದರೆ ಚಂದ. ಸಾಂಸ್ಕೃತಿಕ ಹಿನ್ನಲೆ, ಪರಂಪರೆಗೆ ಧಕ್ಕೆ ಆಗುವ ಆಚರಣೆಗಳನ್ನ ನಿಲ್ಲಿಸಿ ಎಂದು ವಾಟಾಳ್ ನಾಗರಾಜ್ ಹೇಳಿದರು.