ಮೈಸೂರು: ಮೈಸೂರಿನ ರಾಜೇಂದ್ರ ನಗರದ ಪೆನ್ಷನ್ ಬ್ಲಾಕ್ ನಲ್ಲಿರುವ ಕಣಿಯರ ಸೇವಾ ಸಮಾಜಕ್ಕೆ 11.75 ಲಕ್ಷ ವಂಚಿಸಿರುವುದಾಗಿ ಆರೋಪಿಸಿ ಹಾಲಿ ಅಧ್ಯಕ್ಷ ಸೇರಿದಂತೆ ಮೂವರ ವಿರುದ್ದ ಕಾರ್ಯದರ್ಶಿಗಳು ಎನ್.ಆರ್. ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಧ್ಯಕ್ಷ ಬಂಗಾರಸ್ವಾಮಿ, ಮಗಳು ಭವಾನಿ ಹಾಗೂ ಸಂಬಂಧಿಕ ಮನೋಹರ್ ಎಂಬುವರ ವಿರುದ್ದ ಕಾರ್ಯದರ್ಶಿ ರಾಮಸೇವಕ ಎಂಬುವರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಬಂಗಾರಸ್ವಾಮಿ ಹಾಗೂ ರಾಮಸೇವಕ ರವರು ಹಾಲಿ ಹುದ್ದೆಯಲ್ಲಿ ಮುಂದುವರೆಯುತ್ತಿದ್ದರೂ ಅನಧಿಕೃತವಾಗಿ ಬಂಗಾರಸ್ವಾಮಿ ರವರು ಸಂಬಂಧಿಕ ಮನೋಹರ್ ರವರನ್ನ ಅಧ್ಯಕ್ಷರನ್ನಾಗಿ ಹಾಗೂ ಮಗಳು ಭವಾನಿಯನ್ನ ಕಾರ್ದರ್ಶಿಯಾಗಿ ನೇಮಕ ಮಾಡಿಕೊಂಡಿದ್ದಾರೆಂದು,

ಆರೋಪಿಸಿರುವ ರಾಮಸೇವಕ ರವರು ಕಣಿಯರ ಸೇವಾ ಸಮಾಜದ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 11.75 ಲಕ್ಷ ಹಣ ಡ್ರಾ ಮಾಡಿ ದುರುಪಯೋಗಮಾಡಿಕೊಂಡು ಸಂಸ್ಥೆಗೆ ದ್ರೋಹ ಬಗೆದಿದ್ದಾರೆಂದು ಎಫ್.ಐ.ಆರ್.ನಲ್ಲಿ ಉಲ್ಲೇಖಿಸಿದ್ದಾರೆ.ಮೂವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.