ಮೈಸೂರು : ವಿರೋಧ ಪಕ್ಷಗಳ ಶಾಸಕರಿಗೆ ಅನುದಾನ ತಾರತಮ್ಯವಿದೆ ಎಂದು ಹೈಕೋರ್ಟ್ ಗೆ ರಿಟ್ ಸಲ್ಲಿಕೆ ವಿಚಾರವಾಗಿ ಮೈಸೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲರಿಗೂ ಅನುದಾನ ಕೊಡುತ್ತಿದ್ದೇವೆ. ಮುಖ್ಯಮಂತ್ರಿಗಳು ಎಲ್ಲರಿಗೂ 50 ಕೋಟಿ ಕೊಟ್ಟಿದ್ದಾರೆ. ಅವರಿಗೂ 25 ಕೋಟಿಗಳನ್ನು ಅನುದಾನ ಕೊಟ್ಟಿದ್ದಾರೆ. ಬಿಜೆಪಿ ಅವರು ಈ ಹಿಂದೆ ಏನು ಮಾಡಿದ್ರು ಅಂತ ಅವರು ನೆನಪು ಮಾಡಿಕೊಳ್ಳಲ್ಲಿ. ಈ ಹಿಂದೆ ನಮಗೆ ಕೇವಲ 5 ಕೋಟಿ ಕೊಟಿದ್ರು. ಅದನ್ನು ಅವರು ಮರೆಯಬಾರದು ಎಂದರು.

ಆದರೂ ನಾವು ಆ ರೀತಿ ಯಾರಿಗೂ  ತಾರತಮ್ಯ ಮಾಡುವುದಿಲ್ಲ‌. ಲೋಕೋಪಯೋಗಿ ಇಲಾಖೆ ಸೇರಿದಂತೆ ಹಂತ ಹಂತವಾಗಿ ಎಲ್ಲರಿಗೂ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.