ಮೈಸೂರು: ಮೈಸೂರು ನಗರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಮೈಸೂರು ಮಾಜಿ ನಗರ ಪಾಲಿಕೆ ಸದಸ್ಯರಿಂದ ವಿನೂತನ ಜಾಗೃತಿ ಮೂಡಿಸಲಾಯಿತು.

ತಮ್ಮ ವಾರ್ಡ್ ಜನತೆ ಮನೆ ಮನೆಗೆ ಕರಪತ್ರ ಹಂಚಿ ಮಾ.ವಿ ರಾಮ್ ಪ್ರಸಾದ್ ಜಾಗೃತಿ ಮೂಡಿಸಿದರು. ಸರಗಳ್ಳತನ ಆಗದಿರಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕರಪತ್ರದಲ್ಲಿ ಮಾಹಿತಿ ಇದೆ. ಮಾ.ವಿ ರಾಮ್ ಪ್ರಸಾದ್ ಕಾರ್ಯಕ್ಕೆ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.