ಮೈಸೂರು : ಇನೋವಾ ಕಾರು ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಓರ್ವ ಸಾವು, ಇಬ್ಬರಿಗೆ ಗಾಯಗೊಂಡಿರುವ ಘಟನೆ ಹುಣಸೂರು ತಾಲೂಕಿನ ಚಿಲ್ಕುಂದ ತಂಬಾಕು ಮಾರುಕಟ್ಟೆ ಬಳಿ ನಡೆದಿದೆ.
ಸರಗೂರು ತಾಲೂಕಿನ ತುಂಬಸೋಗೆ ನಿವಾಸಿ ಮಲ್ಲಿಕಾರ್ಜುನ (39) ಸಾವನ್ನಪ್ಪಿದ ವ್ಯಕ್ತಿ. ಕಾರಿನಲ್ಲಿದ್ದ ಸರಗೂರು ಮೂಲದ ಶಮಂತ್, ಚೇತನ್ ಗೆ ಗಂಭೀರ ಗಾಯಗೊಂಡವರು. ಮೈಸೂರು-ಮಂಗಳೂರು ಹೆದ್ದಾರಿ 275 ನಲ್ಲಿ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಗೆ ಕಾರು ತೆರಳುತ್ತಿತ್ತು. ಶಮಂತ್ ಪತ್ನಿಯನ್ನ ಕರೆತರಲು ಹೊರಟಿದ್ದ ಮೂವರು ಸ್ನೇಹಿತರಿದ್ದ ಕಾರು.ಇನೋವಾ ಕಾರಿಗೆ ಪಿರಿಯಾಪಟ್ಟಣ ಕಡೆಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿದೆ.
ಟಿಪ್ಪರ್ ಅಡಿಗೆ ಕಾರು ಸಿಲುಕಿಕೊಂಡಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳಿಗೆ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

