ಮೈಸೂರು : ಮೈಸೂರಿನಲ್ಲಿ ಹುಲಿ‌ ದಾಳಿ ಹೆಚ್ಚಾಗಿದ್ದು, ಹುಲಿ ದಾಳಿಗೆ ಒಂದು ಹಸು ಬಲಿ ಮತ್ತೊಂದು ಹಸುವಿಗೆ ಗಂಭೀರ ಗಾಯಗೊಂಡಿದೆ. ಹೊಸ ಹೊಳಲು ಗ್ರಾಮದ ಬಳಿ ಹಸುಗಳ ಮೇಲೆ  ಹುಲಿ ದಾಳಿ ನಡೆಸಿರುವ ಘಟನೆ ಹೆಚ್.ಡಿ ಕೋಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದ ಬಳಿ ನಡೆದಿದೆ.

ಮೊನ್ನೆಯಷ್ಟೇ ಸರಗೂರು ತಾಲ್ಲೂಕಿನ ಮುಳ್ಳೂರು ಬಳಿ ರೈತ ರಾಜಶೇಖರ್ ಇವರನ್ನು ಹುಲಿ  ಬಲಿ ಪಡೆದಿದೆ. ಇದೀಗ ಹಸುಗಳ ಮೇಲೆ ದಾಳಿ ನಡೆಸಿದೆ. ಕಾಡು ಪ್ರಾಣಿಗಳಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.