ಮೈಸೂರು : ಕೇರಳದ ವೈನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಕಬಿನಿ ಡ್ಯಾಮ್ ಗೆ ಒಳ ಹರಿವು ಹೆಚ್ಚಾಗಿದೆ. ಕಬಿನಿ ಜಲಾಶಯಕ್ಕೆ 23009 ಕ್ಯೂಸೆಕ್ ನೀರು ಒಳ ಹರಿವು ಇದೆ.

ಜಲಾಶಯದಿಂದ 9958 ಕ್ಯೂಸೆಕ್ ನೀರು ಹೊರ ಹರಿವಿದ್ದು, 2284 ಅಡಿ ಸಾಮರ್ಥ್ಯದ ಜಲಶಾಯದಲ್ಲಿ 2281.95 ಅಡಿ ನೀರು ಸಂಗ್ರಹವಾಗಿದೆ. 19.52 TMC ನೀರು ಸಂಗ್ರಹದ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ 18.20 TMC ನೀರು ಸಂಗ್ರಹವಾಗಿದೆ.

ಕಬಿನಿ ಡ್ಯಾಮ್ ಸಮೀಪದ ಬಿದರಹಳ್ಳಿ ಬ್ರಿಡ್ಜ್ ಮುಳುಗಡೆಯಾಗಿದೆ. ಕಬಿನಿ ಡ್ಯಾಮ್ ತುಂಬಲು ಕೇವಲ ಒಂದೇ ಅಡಿ ಬಾಕಿ ಇದೆ.
ಅಣೆಕಟ್ಟೆಯ ಸುರಕ್ಷತೆ ದೃಷ್ಠಿಯಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದೆ.