ಮೈಸೂರು : ಶುಭ ಘಳಿಗೆ ಶುಭ ಮೂಹರ್ತದಲ್ಲೇ ಮೈಸೂರಿಗೆ ಬಂದಿದ್ದೇನೆ. ಕಬಿನಿ ಜಲಾಶಯ ಭರ್ತಿಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಎರಡು ರಾಜ್ಯಕ್ಕೆ ವರ ಎಂದು ಮೈಸೂರಿನಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಎರಡೂ ರಾಜ್ಯಗಳನ್ನು ಕಾಪಾಡಲು ಆದೇಶ ಕೊಟ್ಟಿದ್ದಾರೆ. ಸ್ನೇಹಿತರು ಬಂದ್ ಮಾಡಲು ಹೇಳುತ್ತಿದ್ದಾರೆ‌. ಹೋರಾಟ ಮಾಡುವವರನ್ನ ಬೇಡ ಅನ್ನುವುದಿಲ್ಲ. ಹೋರಾಟ ಮಾಡುವುದು ಮಾಧ್ಯಮಕ್ಕೆ ಮಾತ್ರ ಸೀಮಿತವಾಗಬಾರದು. ಹೋರಾಟಕ್ಕೆ ಹಿನ್ನಲೆ ಇರಬೇಕು. ಆಸ್ತಿ ಪಾಸ್ತಿಗೆ ಹಾನಿಯಾಗಬಾರದು‌. ದಯವಿಟ್ಟು ಬಂದ್ ಮಾಡಬೇಡಿ ಎಂದು ಮನವಿ ಮಾಡುತ್ತೇನೆ.

ನಾಳೆ ಸಭೆಯಲ್ಲಿ ನೀರು ಬಿಡುವ ಬಗ್ಗೆ ಚರ್ಚೆ ಮಾಡುತ್ತೇನೆ. ಸದ್ಯ ಡ್ಯಾಂಗಳ ಸ್ಥಿತಿಗತಿಗಳ ಮಾಹಿತಿ ಇದೆ. ನೀರು ಬಿಡುವುದಿಲ್ಲ ಎಂದು ಹೇಳಿದರೆ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ನ್ಯಾಯಲಯಕ್ಕೆ ಗೌರವ ಕೊಡಬೇಕು. ರಾಜ್ಯದ ರೈತರ ಹಿತ ಕಾಯುತ್ತೇವೆ‌. ನಮಗೆ ದೊಡ್ಡ ಜಯ ಸುಪ್ರೀಂಕೋರ್ಟ್ ಕೊಟ್ಟಿದೆ.

ಕೇಂದ್ರ ಸರ್ಕಾರ ಮೇಕೆದಾಟಿನ ಬಗ್ಗೆ ಕಾನೂನು ರೂಪಗೊಂಡಿದೆ ಎಂಬುದನ್ನ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ ಹೇಳಿಕೆ ಬಿಜೆಪಿ ಹೇಳಿಕೆಯನ್ನ ಗಮನಿಸಿದ್ದೇನೆ. ಮೇಕೆದಾಟು ಕಟ್ಟುವ ಬಗ್ಗೆ ತಮಿಳುನಾಡು ಈ ಹಿಂದೆ ಅನುಮತಿ ಕೊಟ್ಟಿರುವ ಬಗ್ಗೆ ದಾಖಲೆಗಳು ಇದೆ. ನ್ಯಾಯಾಲಯದ ತೀರ್ಪನ್ನ ಗೌರವಿಸಬೇಕು ಎಂದು ಮೈಸೂರಿನಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.