ಮೈಸೂರು: ನನ್ನ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿರುವ ಬಗ್ಗೆ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರ ಗೊತ್ತಿಲ್ಲ ಬೆಳಿಗ್ಗೆಯಿಂದ ನಾನು ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದೇನೆ. ಕೃಷ್ಣಾರೆಡ್ಡಿ ಅವರನ್ನು ಕೋರ್ ಕಮಿಟಿ ಅಧ್ಯಕ್ಷ ಮಾಡಿದ್ದಾರೆ.
ಪಕ್ಷ ಸಂಘಟನೆ ಆಗ್ತಿಲ್ಲ ಅಂತ ನನಗೂ ಅನಿಸಿತ್ತು, ನಂಗೇನು ಬೇಸರ ಇಲ್ಲ. ವಿರೋಧ ಪಕ್ಷ ನಾಯಕನ ಆಯ್ಕೆಯಲ್ಲಿ ನನಗೆ ನೋವಾಗಿತ್ತು ಅಷ್ಟೇನಾನು ನನ್ನ ಕೆಲಸ ಮಾಡಿಕೊಂಡಿದ್ದೇನೆ. ನನ್ನ ಸಚಿವ ಮಾಡಿದ್ರು ಅದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ಗೆಳೆಯ ಕೃಷ್ಣಾರೆಡ್ಡಿ ಅವರಿಗೆ ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಪರಿಸ್ಥಿತಿ ಅವರಿಗೆ ಗೊತ್ತು, ಆರ್ಥಿಕವಾಗಿ ನಾನು ಬಲ ಕಳೆದುಕೊಂಡಿದ್ದೇನೆ ಅಂತ ಅವರಿಗೆ ಗೊತ್ತಿದೆ.
ಹೊಸಬರಿಗೆ ಪಕ್ಷ ಕಟ್ಟಲು ಅವಕಾಶ ಕೊಟ್ಟಿದ್ದಾರೆ. ನನಗೆ ಯಾವುದೇ ನೋವಿಲ್ಲ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೇನೆ. ಪರೋಕ್ಷವಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ. ನಾನು ಪಕ್ಷದಲ್ಲೇ ಇದ್ದೇನೆ. ಮುಂದೆ ನೋಡೋಣ.ನಾನು ಬೆಟ್ಟದಲ್ಲಿ ಸಿಎಂ ಪರವಾಗಿ ದಸರಾದಲ್ಲಿ ಆಡಿದ ಮಾತಿಗೆ ನಾನು ಸಿದ್ದರಾಮಯ್ಯ ಜೊತೆಗೆ ಇದ್ದಾನೆ ಅಂತ ತಿಳಿದುಕೊಂಡರು. ನಾನು ಪಕ್ಷದಲ್ಲಿದ್ದುಕೊಂಡು ದ್ರೋಹ ಮಾಡಲ್ಲ.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಲಿ ಅಂತ ಅವರ ಜೊತೆ ಹೋಗಿದ್ದೆ. ಯಡಿಯೂರಪ್ಪ ಸಿಎಂ ಆದ್ರು ಕುಮಾರಸ್ವಾಮಿ ಸಿಎಂ ಆದ್ರು ಅದೇ ಖುಷಿ. ನನ್ನ ಬೆಳೆಯೋಕೆ ಬಿಡಬಾರದು ಅಂತ ಒಂದಷ್ಟು ಮಂದಿ ನನ್ನ ವಿರುದ್ಧ ಕೆಲಸ ಮಾಡಿದ್ರು. ಚಿಕ್ಕ ವಯಸ್ಸಿನಿಂದ ಎಲ್ಲವನ್ನೂ ನೋಡಿಕೊಂಡು ಬಂದಿದ್ದೇನೆ. ದೇವೇಗೌಡರ ಪಕ್ಷ ಉಳಿಸಲು ಹೋರಾಟ ಮಾಡಿದ್ದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

