ಮೈಸೂರು : ರಾಜ್ಯಾಧ್ಯಕ್ಷನಾಗಿ ಮುಂದುವರಿಯುವ ವಿಶ್ವಾಸವಿದೆ. ನನ್ನ ಹೋರಾಟದ ಬಗ್ಗೆ ನಮ್ಮ ಕಾರ್ಯಕರ್ತರು ಮತ್ತು ಹೈಕಮಾಂಡ್ ಗೆ ತೃಪ್ತಿಯಿದೆ. ಅಂತಿಮವಾಗಿ ನಮ್ಮ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಮೈಸೂರಿನಲ್ಲಿ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದರು.
ನನ್ನ ನಗು ಮುಖ ನೋಡಿದರೆ ನಿಮಗೆ ನಾನು ಬದಲಾಗುತ್ತಾನೆ ಎಂದು ಅನ್ನಿಸುತ್ತಾ?, ನಾನು ಬದಲಾಗಬೇಕಾ? ಮುಂದುವರಿಯ ಬೇಕಾ? ಮಾಧ್ಯಮದವರೆ ಹೇಳಿ ಎಂದು ವಿಜಯೇಂದ್ರ ನಗುತ್ತಾ ಕೇಳಿದರು.

