ಮೈಸೂರು: ಇಬ್ಬರು ಮಕ್ಕಳು, ಹೆಂಡತಿಯನ್ನು ಕೊಂದು ಪತಿ ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ಹುಣಸೂರು‌ ನಗರದ‌ ನ್ಯೂ ಮಾರುತಿ ಬಡಾವಣೆಯಲ್ಲಿ ನಡೆದಿದೆ.

ಹರೀಶ್ (40) ಮಕ್ಕಳು ಹೆಂಡತಿಯನ್ನ ಕೊಂದು ಆತ್ಮಹತ್ಯೆಗೈದಿದ್ದಾರೆ. ಒಂದೇ ಮನೆಯಲ್ಲಿ ಹೆಂಡತಿ ಮಕ್ಕಳು‌ ತಾಯಿ ವಾಸವಿದ್ದರು. ಮೂರು ದಿನದ ಹಿಂದೆ ತಾಯಿಯನ್ನ ಹರೀಶ್ ಅಜ್ಜಿ ಮನೆಗೆ ಕಳುಹಿಸಿದ್ದನು.

ಸ್ಥಳಕ್ಕೆ ಹುಣಸೂರು ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಿಖರವಾದ ಕಾರಣ ತಿಳಿದುಬಂದಿಲ್ಲ.