ಮೈಸೂರು: MDCC ಬ್ಯಾಂಕ್ ಮುಂದೆ ಹುಣಸೂರು ರೈತರು ಪ್ರತಿಭಟನೆ ನಡೆಸಿದರು. ಸಾಲ ನೀಡದ MDCC ಬ್ಯಾಂಕ್ ಕಾರ್ಯವೈಖರಿಗೆ ಬೇಸತ್ತು ವಿಷ ಕುಡಿಯಲು ರೈತರು ಮುಂದಾದರು.

ಶಾಸಕ ಜಿಡಿ ಹರೀಶ್ ಗೌಡ ಮುಂದೆಯೇ ವಿಷ ಕುಡಿಯಲು ರೈತರು ಯತ್ನಿಸಿದರು. ಪಿರಿಯಾಪಟ್ಟಣ ಭಾಗದ ರೈತರಿಗೆ MDCC ಬ್ಯಾಂಕ್ ಸಾಲ ನೀಡುತ್ತಿಲ್ಲ. ಸಹಕಾರ ನೀಡಬೇಕಾದ ಬ್ಯಾಂಕ್ ಪಿರಿಯಾಪಟ್ಟಣದ ಶಾಸಕರ ಕೈ ಗೊಂಬೆಯಾಗಿದೆ. ಕಾಲ ಕಾಲಕ್ಕೆ ಸಾಲ ಮರುಪಾವತಿ ಮಾಡಿದ್ರು ನಮಗೆ ಸಾಲ ಕೊಡುತ್ತಿಲ್ಲ ಎಂದರು.

ತಾಳಿ ಮಾರಿ ಸಾಲ ಕಟ್ಟಿದ್ದೀವಿ. ಬ್ಯಾಂಕ್ ಸಲವನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದೇವೆ. ಈಗ ಸಾಲ ನೀಡದೇ ಬ್ಯಾಂಕ್ ಸಿಬ್ಬಂದಿಗಳು ಆಟ ಆಡಿಸುತ್ತಿದ್ದಾರೆ. ನಮಗೆ ಸಾಲ ನೀಡದೇ ಹೋದ್ರೆ ವಿಷ ಕುಡಿದು ಸಾಯುತ್ತೇವೆ. ಪ್ರತಿಭಟನೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹುಣಸೂರು ಶಾಸಕ ಜಿಡಿ ಹರೀಶ್ ಗೌಡ, ಮಾಜಿ ಶಾಸಕ ಕೆ. ಮಹದೇವ್, ಮೈ ಮೂಲ್ ಮಾಜಿ ಅಧ್ಯಕ್ಷ ಪ್ರಸನ್ನ ಸೇರಿ ಹಲವರು ಭಾಗಿಯಾದರು.