ಮೈಸೂರು: ಹೊಲದಲ್ಲಿ‌ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ ಘಟನೆ ಹುಣಸೂರು ತಾಲ್ಲೂಕು ಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ.

ರೈತ ಮುನಿ ಕುಮಾ‌ರ್ ಅವರ ಜೋಳದ ಹೊಲದ ಬದುವಿನಲ್ಲಿ ರಾಜು ಎಂಬವರು ಕೆಲಸ ಮಾಡುವಾಗ ಕಾಣಿಸಿಕೊಂಡಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ರವಾನೆ ಮಾಡಿದ್ದಾರೆ. ಸುಮಾರು 7 ಅಡಿ ಉದ್ದ ಹಾಗೂ 20 ಕೆಜಿ ತೂಕ ಇರುವ ಹೆಬ್ಬಾವನ್ನು ರಕ್ಷಿಸಲಾಗಿದೆ.